ಬುರ್ಖಾ ಅಂಗಡಿ ಮಾಲಿಕ ನೇಣು ಬಿಗಿದು ಆತ್ಮಹತ್ಯೆ - Mahanayaka

ಬುರ್ಖಾ ಅಂಗಡಿ ಮಾಲಿಕ ನೇಣು ಬಿಗಿದು ಆತ್ಮಹತ್ಯೆ

18/02/2021


Provided by

ಬಂಟ್ವಾಳ:  ಬುರ್ಖಾ ಅಂಗಡಿ ಮಾಲಿಕರೋಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಡೆದಿದ್ದು, ಕೈಕಂಬದಲ್ಲಿರುವ ಲಿಬಾಸ್ ಬುರ್ಖಾ ಮಳಿಗೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

36 ವರ್ಷ ವಯಸ್ಸಿನ ಅಬ್ದುಲ್ ರಹ್ಮಾನ್ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.  ಅಂಗಡಿ ಒಳಗಿನ ಮೇಲಂತಸ್ತಿನಲ್ಲಿರುವ ಕೊಠಡಿಯಲ್ಲಿ ಅವರು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಗಡಿಗೆ ಬಂದಾಗ ಅಂಗಡಿಯ ಕೆಲಸದಾಕೆಯ ಬಳಿಯಲ್ಲಿ ತನ್ನ ಮೊಬೈಲ್ ನೀಡಿದ್ದ ರಹ್ಮಾನ್, ನನಗೆ ಫೋನ್ ಬಂದರೆ ರಿಸಿವ್ ಮಾಡು ಎಂದು ಹೇಳಿದ್ದರಂತೆ.  ಕೆಲವು ಹೊತ್ತಿನವರೆಗೆ ಅವರು ಮೇಲಿನಿಂದ ಬಂದಿರಲಿಲ್ಲ. ಮೇಲೆ ಹೋಗಿ ನೋಡುವ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಅವರು ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ನೊಂದಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ