ಬಸ್ ನಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಬಸ್ ಕಂಡೆಕ್ಟರ್: ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ - Mahanayaka

ಬಸ್ ನಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಬಸ್ ಕಂಡೆಕ್ಟರ್: ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ

eraya
30/08/2023


Provided by

ಮಂಗಳೂರು ನಗರದ ಸಿಟಿ ಬಸ್ ನ ಕಂಡಕ್ಟರ್ ಬಸ್ಸಿನ ಎದುರು ಬಾಗಿಲಿನಿಂದ ಬಿದ್ದು ಮೃತಪಟ್ಟ ದಾರುನ ಘಟನೆ ನಗರದ ನಂತೂರು ವೃತ್ತ ಬಳಿ ನಡೆದಿದೆ.

ಸಿಟಿ ಬಸ್ ಪದುವದಿಂದ ಶಿವಭಾಗ್ ಕಡೆ ಹೋಗುವ ವೇಳೆ ನಂತೂರು ವೃತ್ತ ಬಳಿ ಈ ಘಟನೆ ನಡೆದಿದೆ. ಬಸ್ಸಿನ ಎದುರು ಬಾಗಿಲ ಬಳಿ ನಿಂತಿದ್ದ ಈರಯ್ಯ( 23) ಎಂಬುವವರು ಆಯತಪ್ಪಿ ಬಸ್ಸಿನಿಂದ ಬಿದ್ದಿದ್ದಾರೆ.

ತಕ್ಷಣವೇ ಹೀರಯ್ಯ ಅವರನ್ನು ಸಂಚಾರ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಘಟನೆಯ ದೃಶ್ಯ ಸಮೀಪದಲ್ಲೇ ನಿಂತಿದ್ದ ಕಾರೊಂದರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ವೇಗವಾಗಿ ಬಂದ ಬಸ್ ನಿಂದ ಕಂಡೆಕ್ಟರ್ ರಸ್ತೆಗೆ ಬೀಳುತ್ತಿರುವ ಭೀಕರ ದೃಶ್ಯ ಕಂಡು ಬಂದಿದೆ.

ಇತ್ತೀಚಿನ ಸುದ್ದಿ