ಬಾಲಕಿಗೆ ಚಿನ್ನದ ಸರ ಮರಳಿಸಿ ಮಾನವೀಯತೆ ಮೆರೆದ ಬಸ್ ಚಾಲಕ

ಉಡುಪಿ: ಬಸ್ ನಲ್ಲಿ ಬಾಲಕಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಬಸ್ ಚಾಲಕ ಮತ್ತು ಕಂಡೆಕ್ಟರ್ ಬಾಲಕಿಗೆ ಹಿಂದಿರುಗಿಸಿದ ಅಪರೂಪದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.
ಜೂನ್ 20ರಂದು ಬ್ರಹ್ಮಾವರದಿಂದ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳ ಚಿನ್ನದ ಸರ ಕಳೆದುಹೋಗಿದೆ. ಆ ಸರವನ್ನು ನೋಡಿದ ಪ್ರಯಾಣಿಕರೊಬ್ಬರು ಅದನ್ನು ಬಸ್ ಕಂಡೆಕ್ಟರ್ ಮತ್ತು ಚಾಲಕ ಬಳಿ ನೀಡಿದ್ದಾರೆ. ಬಳಿಕ ಬಸ್ ಚಾಲಕ ಅದನ್ನು ಆ ಬಾಲಕಿಗೆ ಹಿಂತಿರುಗಿಸಿದ್ದಾರೆ.
ಸರ ಕಳೆದುಕೊಂಡ ಬಾಲಕಿ ಆತಂಕಗೊಂಡಿದ್ದಾಗ ಬಸ್ ಏಜೆಂಟ್ ಆಕೆಯ ಬಳಿ ಸಮಸ್ಯೆಯನ್ನು ಕೇಳಿದರು. ಬಾಲಕಿ ತನ್ನ ಚಿನ್ನದ ಸರ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾಳೆ. ಆಗ ಆಕೆಯ ಬಳಿ ಇದ್ದ ಟಿಕೆಟ್ ತೆಗೆದುಕೊಂಡ ಏಜೆಂಟರ್ ಎಪಿಎಂ ಬಸ್ ಚಾಲಕನನ್ನು ಸಂಪರ್ಕಿಸಿ ಬಾಲಕಿಗೆ ಚಿನ್ನದ ಸರ ಸಿಗುವಂತೆ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97