ಬಸ್ಸಿನ ಕಿಟಕಿ ತೆರೆಯುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಚಾಲಕನ ಬಂಧನ - Mahanayaka
1:29 PM Thursday 30 - October 2025

ಬಸ್ಸಿನ ಕಿಟಕಿ ತೆರೆಯುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಚಾಲಕನ ಬಂಧನ

ksrtc
20/04/2022

ಪತ್ತನಂತಿಟ್ಟ: ಕೆಎಸ್ಸಾರ್ಟಿಸಿ ಸೂಪರ್ ಡಿಲಕ್ಸ್ ಬಸ್ ನಲ್ಲಿ ಯುವತಿಯ ಮೇಲೆ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ಯುವತಿ ಕೇರಳ ಪೊಲೀಸರಿಗೆ ದೂರು ನೀಡಿದ್ದಾಳೆ.

ಶನಿವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ಪತ್ತನಂತಿಟ್ಟ ಡಿಪೋದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್ ಡಿಲಕ್ಸ್ ಬಸ್ ನಲ್ಲಿ ಸಂತ್ರಸ್ತ ಯುವತಿ ಪ್ರಯಾಣಿಸುತ್ತಿದ್ದಳು. ಬಸ್ಸಿನ ಕಿಟಕಿ ಬಾಗಿಲು ತೆರೆಯಲು ಯುವತಿ ಚಾಲಕನ ನೆರವು ಕೇಳಿದ್ದು, ಈ ವೇಳೆ ಚಾಲಕ ಕಿಟಕಿ ಬಾಗಿಲು ತೆರೆಯುವ ನೆಪದಲ್ಲಿ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಚಾಲಕನ ವರ್ತನೆ ಕಂಡು ಯುವತಿ ಗಾಬರಿಯಾಗಿದ್ದು, ಆ ಸಂದರ್ಭದಲ್ಲಿ ಅಸಹಾಯಕಳಾಗಿದ್ದಳು.  ಬಳಿಕ ಇಮೇಲ್ ಮೂಲಕ ವಿದ್ಯಾರ್ಥಿನಿ ಕೇರಳ ಪೊಲೀಸರಿಗೆ ದೂರು ನೀಡಿದ್ದಾಳೆ.

ಘಟನೆ ಸಂಬಂಧ ವಿಜಿಲೆನ್ಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಬಸ್ಸಿನ ಚಾಲಕ ಶಾಜಹನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವೀಕ್ಷಕರ ನಿರೀಕ್ಷೆ ಸುಳ್ಳಾಗಿಸಿದ ಕೆಜಿಎಫ್ ಚಾಪ್ಟರ್  2: ನೆಗೆಟಿವ್ ವಿಮರ್ಶೆ

ಚಿತ್ರೀಕರಣಕ್ಕೆ ನಿರ್ಮಿಸಿದ ಮನೆಯನ್ನು ಮೀನುಗಾರರಿಗೆ ನೀಡಲು ಮುಂದಾದ ನಟ ಸೂರ್ಯ

ಯಡಿಯೂರಪ್ಪ ಎಷ್ಟು ಕಮಿಷನ್ ನೀಡಿದ್ದಾರೆ?: ದಿಂಗಾಲೇಶ್ವರ ಶ್ರೀಗೆ ಶಾಸಕ ಯತ್ನಾಳ್ ಪ್ರಶ್ನೆ

ಅನುಮತಿಯಿಲ್ಲದೆ ಧಾರ್ಮಿಕ ಮೆರವಣಿಗೆಗಳನ್ನು  ನಡೆಸಲು ಅವಕಾಶವಿಲ್ಲ :ಯೋಗಿ ಆದಿತ್ಯನಾಥ್

ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿ