ಚಾರ್ಮಾಡಿ ಘಾಟ್:  ಬಸ್ಸಿನಲ್ಲಿಯೇ ಕಂಡೆಕ್ಟರ್ ಗೆ ಹೃದಯಾಘಾತ - Mahanayaka

ಚಾರ್ಮಾಡಿ ಘಾಟ್:  ಬಸ್ಸಿನಲ್ಲಿಯೇ ಕಂಡೆಕ್ಟರ್ ಗೆ ಹೃದಯಾಘಾತ

ksrtc
25/12/2021


Provided by

ಕೊಟ್ಟಿಗೆಹಾರ: ಬಸ್ ಕಂಡೆಕ್ಟರ್ ವೊಬ್ಬರು ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾರ್ಮಾಡಿ ಘಾಟ್ ನ ಮಲಯಮಾರುತ ಸಮೀಪ ನಡೆದಿದೆ.

43 ವರ್ಷ ವಯಸ್ಸಿನ ಕಂಡೆಕ್ಟರ್ ವಿಜಯ್ ಎಂಬವರು ಹೃದಯಾಘಾತಕ್ಕೊಳಗಾದವರು ಎಂದು ತಿಳಿದು ಬಂದಿದ್ದು, ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್ ನಲ್ಲಿದ್ದ ಇವರಿಗೆ ಚಾರ್ಮಾಡಿ ಘಾಟ್ ನ ಮಲಯಮಾರುತ ಬಳಿ ಹೃದಯಾಘಾತವಾಗಿದೆ.

ಈ ವೇಳೆ ಬಣಕಲ್ ನ ಸಮಾಜ ಸೇವಕ ಆರೀಫ್ ಅವರು ಆಂಬುಲೆನ್ಸ್ ಮೂಲಕ ಬಣಕಲ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ಚಿಕಿತ್ಸೆ ಫಲಿಸದೇ ನಿರ್ವಾಹಕ ವಿಜಯ್ ಸಾವನ್ನಪ್ಪಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಮಿಳು ಖ್ಯಾತ ಹಾಸ್ಯ ನಟ ವಡಿವೇಲುಗೆ ಅನಾರೋಗ್ಯ: ಶೀಘ್ರ ಚೇತರಿಕೆಗೆ ಅಭಿಮಾನಿಗಳಿಂದ ಪ್ರಾರ್ಥನೆ

ಕ್ರಿಸ್ಮಸ್ ಸಂದೇಶ: ಎಲ್ಲರ ಹೃದಯದಲ್ಲಿ ಶಾಂತಿ ಬೆಳಗಲಿ | ಸಿಸ್ಟರ್ ದೀಪ್ತಿ

ಕ್ರಿಸ್ಮಸ್ ಸಂದೇಶ: ಪ್ರೀತಿಯಿಂದ ಜೀವಿಸಿದಾಗ ನಮ್ಮ ಹೃದಯ ಗೋದಲಿಯಲ್ಲಿ ಯೇಸು ಜನಿಸುತ್ತಾರೆ | ಫಾ.ಮಾಥ್ಯೂ ವೆಲ್ಲಚಾಲಿಲ್

ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಳ್ವಿಕೆ ಬಂದರೂ ಅಚ್ಚರಿಯಿಲ್ಲ: ಸುಬ್ರಮಣಿಯನ್‌ ಸ್ವಾಮಿ

ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾವು

ಇತ್ತೀಚಿನ ಸುದ್ದಿ