ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು: ಚಾಲಕನ ಆತುರಕ್ಕೆ ಜೀವ ಬಲಿ - Mahanayaka
3:13 PM Saturday 13 - September 2025

ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು: ಚಾಲಕನ ಆತುರಕ್ಕೆ ಜೀವ ಬಲಿ

death
11/10/2022

ಉಡುಪಿ: ಬಸ್ ನಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಅಲೆವೂರು ರಾಂಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಗೋಪುರದ ಬಳಿ ಅ.9ರಂದು ಸಂಜೆ ನಡೆದಿದೆ.


Provided by

ಮೃತನನ್ನು ಜಾರ್ಖಂಡ್ ಮೂಲದ ಮಂಜಯ್ ಕುಮಾರ್(19) ಎಂದು ಗುರುತಿಸಲಾಗಿದೆ.  ಉಡುಪಿ ಕಡೆಯಿಂದ ಮೂಡುಬೆಳ್ಳೆಗೆ ಹೋಗುತ್ತಿದ್ದ ಸತ್ಯನಾಥ್ ಬಸ್ ನ ಚಾಲಕ ರಾಕೇಶ್ ಎಂಬಾತನು ಪ್ರಯಾಣಿಕರನ್ನು ಇಳಿಸಲು ಅಲೆವೂರು ಗ್ರಾಮದ ರಾಂಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಗೋಪುರದ ಬಳಿ ಬಸ್ ನಿಲ್ಲಿಸಿದ್ದನು.

ಆದರೆ ಕಂಡಕ್ಟರ್ ಸೂಚನೆ ನೀಡುವ ಮೊದಲೆ ಚಾಲಕನು ಬಸ್ ಅನ್ನು ಒಮ್ಮೆಲೆ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ್ದು, ಇದರ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಮಂಜಯ್ ಕುಮಾರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದರು. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ