ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಬಸ್: ಪೂಜೆ ಸಲ್ಲಿಸಿದ ಗ್ರಾಮಸ್ಥರು - Mahanayaka
11:04 AM Saturday 23 - August 2025

ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಬಸ್: ಪೂಜೆ ಸಲ್ಲಿಸಿದ ಗ್ರಾಮಸ್ಥರು

koratagere tumakuru bus
05/01/2024


Provided by

ಸ್ವಾತಂತ್ರ್ಯ ಬಂದಾಗಿನಿಂದ ಸರ್ಕಾರಿ ಬಸ್ ಸಂಪರ್ಕವೇ ಕಾಣದ ಗ್ರಾಮಕ್ಕೆ ಬಸ್ ಬಂದ ತಕ್ಷಣ ಸಂಬ್ರಮ ಪಟ್ಟ ಗ್ರಾಮಸ್ಥರು ಪೂಜೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನವಿಲು ಕುರಿಕೆ  ಗ್ರಾಮದಲ್ಲಿ ನಡೆದಿದೆ.

ಗೃಹ ಸಚಿವ ಪರಮೇಶ್ವರ್ ಸ್ವ ಕ್ಷೇತ್ರ ಕೊರಟಗೆರೆ ತಾಲೂಕಿನ ಈ ಹಳ್ಳಿಯ ಜನರಿಗೆ ಈಗ ಸಂತೋಷಕ್ಕೆ ಮಿಗಿಲೇ ಇಲ್ಲದಂತಾಗಿತ್ತು.

ಬಸ್ ಸಂಪರ್ಕವಿಲ್ಲದೇ ನಿತ್ಯ ಪರದಾಡುತ್ತಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಇತ್ತೀಚೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಬಸ್ ಗಾಗಿ ಮನವಿ ಸಲ್ಲಿಸಿದ್ದರು.

ಈ ವೇಳೆ ಗ್ರಾಮಕ್ಕೆ ಬಸ್ ಬಿಡುವಂತೆ ಅಂದಿನ ತಹಶೀಲ್ದಾರ್ ನಹಿದಾ ಜಂ ಜಂ ಅವರಿಗೆ  ಗೃಹ ಸಚಿವ ಪರಮೇಶ್ವರ್ ನಿರ್ದೇಶನ ನೀಡಿದ್ದರು.

ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಇದೀಗ ನಗರ ಸಾರಿಗೆ ನಗು ತರಿಸಿದೆ. ಪ್ರತಿದಿನ ತುಮಕೂರು, ಕೊರಟಗೆರೆಯತ್ತ ಶಾಲಾ ಕಾಲೇಜು ಗಳಿಗೆ ಮೈಲುಗಟ್ಟಲೆ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದರು.

ಈಗ ಈ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಸೌಲಭ್ಯ ದೊರೆತಿದೆ. ಸರ್ಕಾರಿ ಬಸ್ ಕಂಡು ಸಂತೋಷ ಪಟ್ಟ ನವಿಲುಕುರಿಕೆ, ದಮಗಲಯ್ಯನ ಪಾಳ್ಯ ಗ್ರಾಮಸ್ಥರು, ಸರ್ಕಾರಿ ಬಸ್ ಗೆ ಬಾಳೆ ಕಂದು, ಹೂ, ಬಲೂನು, ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇತ್ತೀಚಿನ ಸುದ್ದಿ