ಶೌಚಾಲಯಕ್ಕೆ ಹೊರಟ ಉದ್ಯಮಿಗೆ ಎದುರಾದ ಸಿಂಹ: ಮುಂದೆ ನಡೆದದ್ದು ಭಯಾನಕ! - Mahanayaka
10:08 PM Monday 15 - September 2025

ಶೌಚಾಲಯಕ್ಕೆ ಹೊರಟ ಉದ್ಯಮಿಗೆ ಎದುರಾದ ಸಿಂಹ: ಮುಂದೆ ನಡೆದದ್ದು ಭಯಾನಕ!

lion
03/06/2025

ನಮೀಬಿಯಾ: ನಮೀಬಿಯಾದ ವಾಯುವ್ಯ ಪ್ರದೇಶದಲ್ಲಿ ಐಷಾರಾಮಿ ಲಾಡ್ಜ್‌ನಲ್ಲಿ ಬಿಡಾರ ಹೂಡಿದ್ದ ಉದ್ಯಮಿಯೊಬ್ಬರ ಮೇಲೆ ಸಿಂಹವೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ  ನಡೆದಿದೆ.


Provided by

ಬರ್ನ್ಡ್ ಕೆಬೆಲ್ ಎಂಬ ವ್ಯಕ್ತಿ ಸಿಂಹದ ದಾಳಿಗೆ ಬಲಿಯಾದವರಾಗಿದ್ದು, ತನ್ನ ಪತ್ನಿ ಮತ್ತು ಸ್ನೇಹಿತರ ಜೊತೆಗೆ ಸೆಸ್‌ಫಾಂಟೈನ್ ಪ್ರದೇಶದ ಹೋನಿಬ್ ಸ್ಕೆಲಿಟನ್ ಕೋಸ್ಟ್ ಕ್ಯಾಂಪ್ ಬಳಿ ಪ್ರವಾಸಕ್ಕೆ ತೆರಳಿದ್ದ ಅವರು ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದರು.

ಶುಕ್ರವಾರ ಮೇ 30ರಂದು ನಮೀಬಿಯಾದ ವಾಯುವ್ಯ ಪ್ರದೇಶದಲ್ಲಿ ಐಷಾರಾಮಿ ಲಾಡ್ಜ್‌ನಲ್ಲಿ ಬಿಡಾರ ಹೂಡಿದ್ದರು. ಬೆಳಗ್ಗಿನ ವೇಳೆ  ಶೌಚಾಲಯ ಬಳಸಲು ತಮ್ಮ ಡೇರೆಯಿಂದ ಹೊರಬಂದಾಗ ಸಿಂಹವೊಂದು ಹೊಂಚು ಹಾಕಿ ದಾಳಿ ನಡೆಸಿದೆ. ಇತರ ಶಿಬಿರಾರ್ಥಿಗಳು ಪ್ರಾಣಿಯನ್ನು ಓಡಿಸುವಲ್ಲಿ ಯಶಸ್ವಿಯಾಗುವ ಹೊತ್ತಿಗೆ, ಬರ್ನ್ಡ್ ಕೆಬೆಲ್ ಸಾವಿಗೀಡಾಗಿದ್ದರು.

ಘಟನೆ ನಡೆದ ಪ್ರದೇಶವು ಮರುಭೂಮಿಗೆ ಹೊಂದಿಕೊಂಡ ಪ್ರದೇಶವಾಗಿದೆ. ಇದು ಸಿಂಹಗಳ ಜನಸಂಖ್ಯೆಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ,  2023 ರ ಅಂಕಿಅಂಶಗಳ ಪ್ರಕಾರ, ಸುಮಾರು 60 ವಯಸ್ಕ ಸಿಂಹಗಳು ಮತ್ತು ಒಂದು ಡಜನ್‌ ಗಿಂತಲೂ ಹೆಚ್ಚು ಮರಿಗಳು ಈ ಪ್ರದೇಶದಲ್ಲಿ ಕಂಡುಬಂದಿತ್ತು. ಇತ್ತೀಚೆಗಿನ ದಿನಗಳಲ್ಲಿ ಸಿಂಹಗಳ ಸಂಖ್ಯೆ ಕುಸಿಯುತ್ತಿದೆಯಂತೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ