ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು - Mahanayaka
11:33 AM Wednesday 20 - August 2025

ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು

thippe swamy chidananda
11/10/2021


Provided by

ಬೆಂಗಳೂರು: ಸಿಡಿಲು ಬಡಿದು ತಂದೆ ಸಾವನ್ನಪ್ಪಿ, ಮಗ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ನೈಸ್ ರಸ್ತೆ ನಡೆದಿದ್ದು, ತಂದೆ ಮಗ ಮರದ ಕೆಳಗೆ ನಿಂತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ತುಮಕೂರು ಮೂಲದ ಟಿ.ದಾಸರಹಳ್ಳಿಯ ನಿವಾಸಿ 46 ವರ್ಷ ವಯಸ್ಸಿನ  ತರಕಾರಿ ವ್ಯಾಪಾರಿ ತಿಪ್ಪೇಸ್ವಾಮಿ ಮೃತಪಟ್ಟವರಾಗಿದ್ದು, ಇವರ ಮಗ 22 ವರ್ಷ ವಯಸ್ಸಿನ ಚಿದಾನಂದ್ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ ತಮ್ಮ ಮನೆಯಿಂದ ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ಹೋಂಡಾ ಆಕ್ಟಿವಾದಲ್ಲಿ  ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಬ್ಯಾಡರಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಜೋರಾಗಿ ಮಳೆ ಸುರಿದಿದೆ. ಮಳೆ ಬಿಡುವವರೆಗೆ ಮರದ ಕೆಳಗೆ ನಿಲ್ಲೋಣ ಎಂದು ತಂದೆ ಮಗ ಇಬ್ಬರೂ ನಿಂತಿದ್ದರು. ಈ ವೇಳೇ ಏಕಾಏಕಿ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ.

ಈ ರಸ್ತೆಯಲ್ಲಿ ಬ್ಯಾಡರಹಳ್ಳಿ ಠಾಣೆಯ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ, ಮರದ ಕೆಳಗೆ ಇವರಿಬ್ಬರು ಬಿದ್ದಿರುವುದು ಕಂಡು ಸ್ಥಳಕ್ಕೆ ಬಂದ ಪೊಲೀಸರು ಗಮನಿಸಿದಾಗ ತಂದೆ ಸಾವನ್ನಪ್ಪಿದ್ದು, ಪುತ್ರ ಚಿದಾನಂದನ ಸ್ಥಿತಿ ಗಂಭೀರವಾಗಿತ್ತು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ