ಅಣ್ಣವ್ರ ಹಾಡಿಗೆ ಸಿ.ಟಿ.ರವಿ ಜೊತೆಗೆ ಮೈಮರೆತು ಸ್ಟೆಪ್ ಹಾಕಿದ ಕಾಫಿನಾಡ ಚಂದು! - Mahanayaka

ಅಣ್ಣವ್ರ ಹಾಡಿಗೆ ಸಿ.ಟಿ.ರವಿ ಜೊತೆಗೆ ಮೈಮರೆತು ಸ್ಟೆಪ್ ಹಾಕಿದ ಕಾಫಿನಾಡ ಚಂದು!

ct ravi chandu dance
28/10/2022

ಚಿಕ್ಕಮಗಳೂರು:  ಕಾಫಿನಾಡಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಬ್ಬದಂತೆ ಆಚರಿಸಲ್ಪಟ್ಟಿತು.  ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ  ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟ ಬೇಕು ಅನ್ನೋ  ಹಾಡಿಗೆ ಸಿ.ಟಿ.ರವಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ವೇಳೆ ಸಚಿವ ಬೈರತಿ ಬಸವರಾಜ್ ಹಾಗೂ ಹಲವರು ಸಿ.ಟಿ.ರವಿ ಅವರಿಗೆ ಸಾಥ್ ನೀಡಿದರು.

ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮ ವಿಶೇಷವಾಗಿ ಗಮನ ಸೆಳೆಯಿತು. ಒಂದೆಡೆ ಸಿ.ಟಿ.ರವಿ ಅವರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು’ ಎಂಬ ಡಾ.ರಾಜ್ ಕುಮಾರ್ ಅವರು ಹಾಡಿದ ಹಾಡನ್ನು ಹಾಡುತ್ತಾ, ಸ್ಟೆಪ್ ಹಾಕುತ್ತಿದ್ದರೆ, ಸೋಷಿಯಲ್ ಮೀಡಿಯಾ ಸ್ಟಾರ್, ಕಾಫಿನಾಡ ಚಂದು ಮತ್ತೊಂದೆಡೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಸಿ.ಟಿ.ರವಿ ಅವರ ಎದುರು ಕಾಫಿನಾಡ ಚಂದು ಮೈಮರೆತು ಸ್ಟೆಪ್ ಹಾಕುವ ಮೂಲಕ ನೆರೆದವರಿಗೆ ಮನರಂಜನೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ