ಎಟಿಎಂನಲ್ಲಿ ನಮೂದಿಸಿದ್ದಕ್ಕಿಂತಲೂ ದುಪ್ಪಟ್ಟು ಹಣ ಸುರಿಯಿತು | ಡ್ರಾ ಮಾಡಲು ಹೋದವರಿಗೆ ಸಿಕ್ಕಿದ್ದೆಷ್ಟು ಗೊತ್ತಾ? - Mahanayaka
8:45 PM Wednesday 15 - October 2025

ಎಟಿಎಂನಲ್ಲಿ ನಮೂದಿಸಿದ್ದಕ್ಕಿಂತಲೂ ದುಪ್ಪಟ್ಟು ಹಣ ಸುರಿಯಿತು | ಡ್ರಾ ಮಾಡಲು ಹೋದವರಿಗೆ ಸಿಕ್ಕಿದ್ದೆಷ್ಟು ಗೊತ್ತಾ?

canara bank
23/05/2021

ಬಳ್ಳಾರಿ:  ಕೆನರಾ ಬ್ಯಾಂಕ್ ನ ಎಟಿಎಂ ನಲ್ಲಿ ಗ್ರಾಹಕರು ನಮೂದಿಸಿದ ಹಣಕ್ಕಿಂತಲೂ ಅಧಿಕ ಹಣ ಸುರಿದ ಘಟನೆ ನಡೆದಿದ್ದು, ಎಟಿಎಂನಲ್ಲಿ ಕಂಡು ಬಂದ ದೋಷವನ್ನು ಗ್ರಾಹಕರೇ ಪೊಲೀಸರ ಗಮನಕ್ಕೆ ತಂದಿದ್ದಾರೆ.


Provided by

ಜಿಲ್ಲೆಯ ಗಡಿಗಿ ಚನ್ನಪ್ಪ ವೃತ್ತದ ಬಳಿಯ ಕೆನರಾ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ.  ಗ್ರಾಹಕರೊಬ್ಬರು 500 ರೂಪಾಯಿಗಳನ್ನು ಡ್ರಾ ಮಾಡಲು ನಮೂದಿಸಿದರೆ,  2500 ರೂಪಾಯಿ ಹಣ ಡ್ರಾ ಆಗಿದೆ. ಮತ್ತೊಬ್ಬರು ಗ್ರಾಹರು 10 ಸಾವಿರ ರೂಪಾಯಿಗಳನ್ನು ನಮೂದಿಸಿದ್ದು, ಅವರಿಗೆ  50 ಸಾವಿರ ರೂಪಾಯಿಗಳು ಬಂದಿದೆ.

ಕೆನರಾ ಬ್ಯಾಂಕ್ ನ ಎಟಿಎಂನಲ್ಲಿ ಇಂತಹದ್ದೊಂದು ದೋಷ ಕಂಡು ಬಂದದ್ದನ್ನು ಗಮನಿಸಿದ ಗ್ರಾಹಕರು ತಕ್ಷಣವೇ  ಗಾಂಧಿನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್  ಲಕ್ಷ್ಮಣ್ ಹಾಗೂ ಪಿಸಿ ಕಾಶಿನಾಥ್ ಅವರ ಗಮನಕ್ಕೆ ತಂದಿದ್ದು,  ಕೂಡಲೇ ಅವರು ಎಟಿಎಂ ಬಳಿಗೆ ಬಂದು ಬ್ಯಾಂಕ್ ಗೆ ಆಗಬಹುದಾಗಿದ್ದು ಭಾರೀ ಮೊತ್ತದ ನಷ್ಟವನ್ನು ತಪ್ಪಿಸಿದ್ದಾರೆ.

ಇನ್ನೂ ಈ ಬಗ್ಗೆ ಬ್ಯಾಂಕ್ ನವರಿಗೆ ಕರೆ ಮಾಡಿದಾಗ ಮಷಿನ್ ನಲ್ಲಿ ತಾಂತ್ರಿಕ ದೋಷ ಇದ್ದಿರಬಹುದು. ನಮ್ಮಲ್ಲಿ ಈಗ  ತಾಂತ್ರಿಕ ನಿರ್ವಾಹಕರಿಲ್ಲ ಎಂಬ  ಅಸಡ್ಡೆ ಹಾಗೂ ನಿರ್ಲಕ್ಷ್ಯದ ಮಾತುಗಳಾಡಿ, ದೂರವಾಣಿ ಕರೆ ಕಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದು ಹಲವಾರು ಅನುಮಾನಗಳಿಗೂ ಕಾರಣವಾಗಿದ್ದು, ಉದ್ದೇಶ ಪೂರ್ವಕವಾಗಿ ಈ ರೀತಯಾಗಿ ಬ್ಯಾಂಕ್ ಎಟಿಎಂಗಳನ್ನು ಮಾಡಲಾಗುತ್ತಿದೆಯೇ ಎನ್ನುವ ಅನುಮಾನಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ