ಇವಿಎಂನಲ್ಲಿ ದಾಖಲಾದ ಮತಗಳ ಸಂಖ್ಯೆಯನ್ನು ಹೇಳೋಕ್ಕಾಗಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಹೇಳಿಕೆ - Mahanayaka

ಇವಿಎಂನಲ್ಲಿ ದಾಖಲಾದ ಮತಗಳ ಸಂಖ್ಯೆಯನ್ನು ಹೇಳೋಕ್ಕಾಗಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಹೇಳಿಕೆ

23/05/2024

ಒಂದು ಇವಿಎಂನಲ್ಲಿ ದಾಖಲಾದ ಮತಗಳ ಸಂಖ್ಯೆಯ ವಿವರ ಸಾರ್ವಜನಿಕಗೊಳಿಸಲು ತನಗೆ ಕಾನೂನುಬದ್ಧ ಅಧಿಕಾರವಿಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟಿಗೆ ಚುನಾವಣಾ ಆಯೋಗ ಹೇಳಿದೆ. ಆ ದಾಖಲೆಯನ್ನು ಅಭ್ಯರ್ಥಿಗಳು ಮತ್ತು ಅವರ ಏಜಂಟರಿಗೆ ಮಾತ್ರ ಒದಗಿಸಬಹುದಾಗಿದೆ ಎಂದು ವಿವರ ನೀಡಿದೆ.

ಮತದಾನ ಮಾಡಿದ ಒಟ್ಟು ಮತದಾರರ ಸಂಖ್ಯೆಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಕೋರಿ ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ. ಎರಡು ಹಂತದ ಲೋಕಸಭಾ ಚುನಾವಣೆ ಬಳಿಕ ಮತದಾನ ಅಂಕಿಅಂಶಗಳನ್ನು ಪ್ರಕಟಿಸುವಲ್ಲಿ ಆಯೋಗದ ವಿಳಂಬದ ಅನಂತರ ಈ ಅರ್ಜಿ ಸಲ್ಲಿಸಲಾಗಿತ್ತು.

ಚುನಾವಣಾ ಆಯೋಗದ ವಿರುದ್ಧ ಸಂಶಯ ಉಂಟು ಮಾಡುವ ದುರುದ್ದೇಶಿತ ಅಭಿಯಾನದ ಭಾಗವಾಗಿ ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ ಕಾರ್ಯಾಚರಿಸುತ್ತಿದೆ ಎಂದೂ ಚುನಾವಣಾ ಆಯೋಗ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ