ನಿಯಂತ್ರಣ ತಪ್ಪಿ ತುಂಗಾ ನದಿಯ ಉಪ ನದಿಗೆ ಬಿದ್ದ ಕಾರು - Mahanayaka
11:04 AM Tuesday 9 - September 2025

ನಿಯಂತ್ರಣ ತಪ್ಪಿ ತುಂಗಾ ನದಿಯ ಉಪ ನದಿಗೆ ಬಿದ್ದ ಕಾರು

chikkamagaluru
07/09/2025

ಚಿಕ್ಕಮಗಳೂರು:  ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪ ನದಿಗೆ ಕಾರು ಬಿದ್ದಿರುವ ಘಟನೆ ನಡೆದಿದೆ.  ಕಾರಿನಲ್ಲಿದ್ದ ನಾಲ್ವರು ಪವಾಡಸದೃಶವಾಗಿ ಪಾರಾಗಿದ್ದಾರೆ.


Provided by

ಶೃಂಗೇರಿ ತಾಲೂಕಿನ ಗುಲಗಂಜಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಾರ್ಕಳ ದಿಂದ ಶೃಂಗೇರಿಗೆ ಆಗಮಿಸುತ್ತಿದ್ದ ಕಾರು  ಏಕಾ–ಏಕಿ ಚಾಲಕನ ನಿಯಂತ್ರಣ ತಪ್ಪಿ ಉಪನದಿಗೆ ಬಿದ್ದಿದ್ದೆ.  ಉಪನದಿಗಿದ್ದ ತಡೆ ಗೋಡೆಗೆ ಡಿಕ್ಕಿ ಹೊಡೆದ ವೇಳೆ ತಡೆ ಗೋಡೆ ಮುರಿದು ನದಿಗೆ ಬಿದ್ದ ಕಾರು ಬಿದ್ದಿದೆ ಎನ್ನಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನವದ ವ್ಯಾಪ್ತಿಯಲ್ಲಿರೋ ಗುಲಗಂಜಿ ಗ್ರಾಮ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಈ ಘಟನೆ ನಡೆದಿದೆ.

ರಾತ್ರಿ ಕಾರ್ಕಳದಿಂದ ಶೃಂಗೇರಿಗೆ ಕಾರು ಆಗಮಿಸುತ್ತಿತ್ತು. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.  ಘಟನೆ ಸಂಬಂಧ  ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ