ಆದಿದ್ರಾವಿಡ ಸಮುದಾಯದ  ಯುವತಿಯರ ಜಾತಿ ನಿಂದನೆ: ಆದಿದ್ರಾವಿಡ ಸಮಾಜ ಸೇವಾ ಸಂಘ ಖಂಡನೆ - Mahanayaka
1:17 PM Wednesday 15 - October 2025

ಆದಿದ್ರಾವಿಡ ಸಮುದಾಯದ  ಯುವತಿಯರ ಜಾತಿ ನಿಂದನೆ: ಆದಿದ್ರಾವಿಡ ಸಮಾಜ ಸೇವಾ ಸಂಘ ಖಂಡನೆ

umesh krishnapura
07/11/2023

ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು  ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಯುವತಿಯರನ್ನು ಪದವು  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಬಿಲ್ಲವ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು, ನೀವು ಕೀಳು ಜಾತಿಯವರು ಎಂದು ಜಾತಿ ನಿಂದನೆ ಮಾಡಿ ನೀವು ದೇವಸ್ಥಾನದ ಒಳಗೆ ಬಂದರೆ ದೇವಸ್ಥಾನಕ್ಕೆ ಬ್ರಹ್ಮ ಕಲಶ ಮಾಡಬೇಕಾಗುತ್ತದೆ ಎಂದು ತುಂಬಾ ಕೀಳಾಗಿ ಮಾತಾಡಿದ್ದಾರೆ. ಈ ಘಟನೆಯನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಬಂಟ್ವಾಳ ತಾಲೂಕು ಸಮಿತಿ ಉಮೇಶ್ ಕೃಷ್ಣಾಪುರ ತಿಳಿಸಿದ್ದಾರೆ.


Provided by

ಬಂಟ್ವಾಳ ತಾಲೂಕು ಸಮಿತಿಯು ಈ ಘಟನೆಯನ್ನು ಖಂಡಿಸುವುದರ ಜೊತೆಗೆ ಇನ್ನು ಮುಂದೆ ಆದಿದ್ರಾವಿಡ ಸಮುದಾಯದವರ ಮೇಲೆ ಯಾವುದೇ ಜಾತಿ ಆಗಲಿ ಸಂಘಟನೆಯಾಗಲಿ ಜಾತಿನಿಂದನೆ, ದೌರ್ಜನ್ಯ ಹಲ್ಲೆ ಮುಂತಾದ ಯಾವುದೇ ಪ್ರಕರಣ ನಡೆದರೂ ಅದರ ಪ್ರತಿಕ್ರಿಯೆ ತುಂಬಾ ಗಂಭೀರವಾಗಿರುತ್ತದೆ. ಇದು ಉತ್ತರ ಭಾರತ ಅಲ್ಲ ಮತ್ತು ಇನ್ನೊಂದು ಉತ್ತರಪ್ರದೇಶ ಆಗಲು ನಾವು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಆದಿದ್ರಾವಿಡ ಸಮುದಾಯದವರನ್ನು ಕೀಳಾಗಿ ಕಾಣುವವರಿಗೆ ತಿಳಿಸಲು ಬಯಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:

ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯೆಯರಿಗೆ ಜಾತಿ ನಿಂದನೆ: ದೂರು ದಾಖಲು

ಇತ್ತೀಚಿನ ಸುದ್ದಿ