ಜಾತಿ ಸಮೀಕ್ಷೆ: ಉಪ ಜಾತಿಯನ್ನು ಕಡ್ಡಾಯವಾಗಿ ಹೇಳಬೇಕು: ಇಲ್ಲವಾದರೆ ಸಮಸ್ಯೆ ಏನು? - Mahanayaka
9:25 AM Thursday 16 - October 2025

ಜಾತಿ ಸಮೀಕ್ಷೆ: ಉಪ ಜಾತಿಯನ್ನು ಕಡ್ಡಾಯವಾಗಿ ಹೇಳಬೇಕು: ಇಲ್ಲವಾದರೆ ಸಮಸ್ಯೆ ಏನು?

caste survey
06/05/2025

ಮಂಗಳೂರು: ರಾಜ್ಯದಲ್ಲಿ ಒಳಮೀಸಲಾತಿಗಾಗಿ ಸಮೀಕ್ಷೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಕರಾವಳಿಯಲ್ಲಿ ಪರಿಶಿಷ್ಟ ಜಾತಿ ಜನರಲ್ಲಿ ತಮ್ಮ ಉಪಜಾತಿಗಳನ್ನು ಹೇಳಬೇಕೇ? ಬೇಡವೇ ಎನ್ನುವ ಗೊಂದಲ ಸೃಷ್ಟಿಯಾಗಿದೆ.


Provided by

ಕೆಲವು ಸಂಘಟನೆಗಳು ಉಪ ಜಾತಿಯನ್ನು ಕಡ್ಡಾಯವಾಗಿ ಹೇಳಬೇಕು ಎಂದರೆ, ಇನ್ನು ಕೆಲವು ಸಂಘಟನೆಗಳು ಉಪ ಜಾತಿ ಗೊತ್ತಿಲ್ಲ ಎಂದು ಹೇಳಬೇಕು ಎಂದು ಹೇಳಿದೆ. ಇದರಿಂದಾಗಿ ಪರಿಶಿಷ್ಟ ಜಾತಿಯವರಲ್ಲಿ ಇದೊಂದು ಗೊಂದಲಕ್ಕೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗಳೆಂದು ರಾಜ್ಯದಲ್ಲಿ ಅಧಿಸೂಚಿತ ಕೊಂಡಿರುವ 101 ಜಾತಿಗಳ ಪೈಕಿ ಕ್ರಮ ಸಂಖ್ಯೆ 1, 2 ಮತ್ತು 3ರಲ್ಲಿ ಅನುಕ್ರಮವಾಗಿ ಪಟ್ಟಿ ಮಾಡಲಾಗಿರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಹೆಸರಿನ ಜಾತಿಯವರು ತಮ್ಮ ಉಪ ಜಾತಿಯನ್ನು ಹೇಳಬೇಕೇ ಎನ್ನುವ ಗೊಂದಲದಲ್ಲಿದ್ದಾರೆ.

ಉಪಜಾತಿ ಕಡ್ಡಾಯವಾಗಿ ಹೇಳಬೇಕು:

ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಪರಿಶಿಷ್ಟ ಜಾತಿಯ ಗುಂಪಿನವರು ತಮ್ಮ ಪೂರ್ವಜರಿಂದ ಬಂದಿರುವ ಉಪ ಜಾತಿಯ ಮೂಲ ಹೆಸರನ್ನು ಕಡ್ಡಾಯವಾಗಿ ಹೇಳಬೇಕು. ಮೂಲ ಜಾತಿಯ ಹೆಸರು ಹೇಳದೇ ಗೊತ್ತಿಲ್ಲ ಎಂದರೆ, ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಮಸ್ಯೆಗಳಿವೆ.

ಉಪ ಜಾತಿಗಳು ಒಬ್ಬರ ಅಸ್ತಿತ್ವವನ್ನು ತೋರಿಸುವಂತದ್ದಾಗಿದೆ.  ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಯಾವುದೇ ಸಮುದಾಯವನ್ನು ಹೇಳಬಹುದು. ಆದರೆ ನಿಮ್ಮ ಉಪ ಜಾತಿಯಲ್ಲಿ ನಿಮ್ಮ ಮೂಲ ಜಾತಿಯನ್ನು ಕಡ್ಡಾಯವಾಗಿ ಹೇಳಬೇಕು. ಇಲ್ಲವಾದರೆ ನೀವು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುವುದು ಮಾತ್ರವಲ್ಲದೇ, ಭಾರತದಲ್ಲಿ ನಿಮ್ಮ ಗುರುತು, ನಿಮ್ಮ ಮೂಲ ಯಾವುದು ಎನ್ನುವುದನ್ನು ಸಾಬೀತುಪಡಿಸಲು ವಿಫಲರಾಗಬಹುದು. ಮುಂದೆ ನಿಮ್ಮ ಪೌರತ್ವ ಸಾಬೀತು ಪಡಿಸುವ ಸಂದರ್ಭ ಬಂದರೆ ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಹಿರಿಯ ಹೋರಾಟಗಾರರ ಅಭಿಪ್ರಾಯವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ