ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಿಗ್ಗೆ ಇಂಡೋನೇಷ್ಯಾಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಪ್ರಮುಖ ದೇಶಗಳೊಂದಿಗೆ ಭಾರತದ ಪಾಲುದಾರಿಕೆಯ ಭವಿಷ್ಯದ ರೂಪರೇಖೆಗಳ ಬಗ್ಗೆ ಚರ್ಚಿಸಲಿದ್ದಾರೆ. "ಜಕಾರ್ತಾದಲ್ಲಿ ಬಂದಿಳಿದಿದ್ದೇನೆ. ಆಸಿಯಾನ್ ಸಂಬಂಧಿತ ಸಭೆಗಳನ್ನು ಎದುರು ನ...
1999 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಕಲಾವಿದ ಲ್ಯಾರಿ ಸಿಂಕ್ಲೇರ್ ಹೇಳಿದ್ದಾರೆ. ಫಾಕ್ಸ್ ನ್ಯೂಸ್ ನ ಮಾಜಿ ನಿರೂಪಕ ಟಕರ್ ಕಾರ್ಲ್ಸನ್ ಅವರೊಂದಿಗಿನ ಸಂದರ್ಶನದಲ್ಲಿ, ಕಲಾವಿದ ಲ್ಯಾರಿ ಸಿಂಕ್ಲೇರ್ ಅವರು ಒಬಾಮಾ ಅವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆ ಎಂದು ಕೆ...
ಭಾರತದ ವೈವಿಧ್ಯತೆ ಮತ್ತು ಅದರ ಅಸಾಧಾರಣ ಯಶಸ್ಸು ಎಂದರೆ ಜಿ 20 ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು. ಸರಿಯಾದ ಸಮಯದಲ್ಲಿ ಸರಿಯಾದ ದೇಶಕ್ಕೆ ಸಿಕ್ಕಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಕಳೆದ ವರ್ಷ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಜಗತ್ತು ಅಸಂಖ್ಯಾತ ಸವಾಲುಗಳನ್ನು ಎ...
ಇದೇ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಜಿ20 ನಾಯಕರು ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನು ಶೃಂಗಸಭೆಗೂ ಎರಡು ದಿನ ಮುಂಚೆಯೇ ಅಂದರೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೊದಲಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಜಕಾರ್ತಾದಲ್ಲಿ ನಡೆಯಲಿರುವ ಆಸಿಯಾನ್ ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿ...
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ಗೆ ಕೊರೊನಾ ಸೋಂಕು ತಾಗಿದೆ. ಇತ್ತ ಜೋ ಬೈಡನ್ ವರದಿ ಕೋವಿಡ್ ನೆಗೆಟಿವ್ ಬಂದಿದ್ದು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ವೈಟ್ ಹೌಸ್ನ ಮೂಲಗಳು ತಿಳಿಸಿವೆ. ಜೋ ಬೈಡನ್ ಮತ್ತು ಅವರ ಪತ್ನಿಗೆ ಈಗಾಗಲೇ ಒಂದು ಬಾರಿ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು. ...
ಅಟ್ಲಾಂಟಾದಿಂದ ಬಾರ್ಸಿಲೋನಾಗೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಾಂತಿ ಮಾಡಿದ ಘಟನೆ ನಡೆದಿದೆ. ವಾಂತಿ ಮಾಡಲು ಪ್ರಾರಂಭ ಮಾಡಿದಾಗ ತುರ್ತು ಪರಿಸ್ಥಿತಿ ಉದ್ಭವಿಸಿತು. ಹೀಗಾಗಿ ವಿಮಾನದೊಳಗೆ ಕೊಳಕು ಮತ್ತು ದುರ್ವಾಸನೆ ಹರಡಿತು. ಜನರು ಉಸಿರಾಡಲು ತೊಂದರೆ ಅನುಭವಿಸಿದರು. ಅಂತಿಮವಾಗಿ ಫ್ಲೈಟ್ ಕ್ಯಾಪ್ಟನ್ ವಿಮಾನ ನಿಲ್ದಾಣಕ್ಕೆ ಮ...
ಭಾರತೀಯ-ಅಮೆರಿಕನ್ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ತಡೆಯುವಲ್ಲಿ ಭಾರತದ ಪಾತ್ರವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಯುಎಸ್ ಅಗತ್ಯಕ್ಕಿಂತ ಸ್ವಲ್ಪ ಕಡಿಮೆ ವಿಶ್ವಾಸಾರ್ಹತೆ ಹೊಂದಿದೆ. ಅಧ್ಯಕ್ಷರಾದರ...
ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಜಾರ್ಜಿಯಾ ರಾಜ್ಯವು ಅಕ್ಟೋಬರ್ ತಿಂಗಳನ್ನು 'ಹಿಂದೂ ಪರಂಪರೆಯ ತಿಂಗಳು' ಎಂದು ಘೋಷಿಸಿದೆ. ಈ ರಾಜ್ಯದ ಪ್ರಗತಿಯಲ್ಲಿ 'ಹಿಂದೂ ಅಮೆರಿಕನ್' ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದೆ. ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ಈ ಘೋಷಣೆ ಮಾಡಿದ್ದು, ಹಿಂದೂ ಸಂಸ್ಕೃತಿ ಮತ್ತು ಭಾರತದಲ್ಲಿ ಬೇರೂರಿರುವ ವೈವಿಧ್ಯಮ...
ಕೋಟಿ ಕೋಟಿ ನಿರೀಕ್ಷೆ ಹುಸಿಯಾಯಿತು. ಕುತೂಹಲವೆಲ್ಲವೂ ನೀರಲ್ಲಿ ಹೋಮ ಮಾಡಿದಂತಾಯಿತು. ಹೌದು. ಭಾರತ - ಪಾಕಿಸ್ತಾನ ನಡುವಿನ ಪಂದ್ಯವು ಮಳೆಗೆ ಬಲಿಯಾಯಿತು. ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಧಾರಾಕಾರ ಮಳೆ ಸುರಿದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದಕ್ಕೂ ಮುನ್...
ಗಾಯದ ಮೇಲೆ ಮತ್ತಷ್ಟು ಬರೆ. ಹೌದು. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ ದಾಖಲಾಗಿದೆ. ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ದರದಲ್ಲಿ ಒಮ್ಮೆಲೇ 14.91 ರೂ. ಏರಿಕೆ ಕಂಡಿದೆ. ...