ಬ್ಯಾನ್ ಬ್ಯಾನ್: ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇನ್ಮುಂದೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ನಿಷೇಧ..! - Mahanayaka

ಬ್ಯಾನ್ ಬ್ಯಾನ್: ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇನ್ಮುಂದೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ನಿಷೇಧ..!

21/09/2023

ಸ್ವಿಟ್ಜರ್ ಲ್ಯಾಂಡ್ ನಲ್ಲಿ ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾ ಹಾಗೂ ನಿಕಾಬ್ (ಮುಖ ಮುಚ್ಚುವಂತೆ ಧರಿಸುವ ವಸ್ತ್ರ) ಧರಿಸುವುದನ್ನು  ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ.

ಸ್ವಿಟ್ಜರ್ ಲ್ಯಾಂಡ್ ಪಾರ್ಲಿಮೆಂಟ್‌ನಲ್ಲಿ ಈ ವಿಧೇಯಕವು ಜನಪ್ರತಿನಿಧಿಗಳ ಬಹುಮತ ಪಡೆದು ಅಂಗೀಕಾರಗೊಂಡಿದೆ. ಈಗಾಗಲೇ ಇದನ್ನು ಮೇಲ್ಮನೆಯಲ್ಲೂ ಅನುಮೋದಿಸಲಾಗಿದೆ. ಈ ಕಾನೂನಿನ ಪ್ರಕಾರ ಇನ್ನುಮುಂದೆ ಸ್ವಿಸ್‌ನಲ್ಲಿ ಮುಸ್ಲಿಮ್ ಹೆಣ್ಮಕ್ಕಳು ಧರಿಸುವ ಬುರ್ಖಾ, ನಿಕಾಬ್ ಹಾಗೂ ಪ್ರತಿಭಟನಾಕಾರರು ಧರಿಸುವ ಮಾಸ್ಕ್‌ಗಳನ್ನು ನಿಷೇಧಿಸಿದೆ. ಈ ಕಾನೂನನ್ನು ಉಲ್ಲಂಘಿಸಿದರೆ 1,000 ಸ್ವಿಸ್‌ ಫ್ರಾಂಕ್ಸ್ (92,051 ಸಾವಿರ ರೂಪಾಯಿ) ದಂಡವನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಈ ಕಾನೂನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರು ಪ್ರವೇಶಿಸಬಹುದಾದ ಖಾಸಗಿ ಕಟ್ಟಡಗಳಲ್ಲಿ ಅನ್ವಯವಾಗುತ್ತದೆ. ಇದೇ ಮಾದರಿಯ ಕಾನೂನನನ್ನು ಬೆಲ್ಜಿಯಂ ಮತ್ತು ಫ್ರಾನ್ಸ್‌ನಂತಹ ಇತರ ದೇಶಗಳು ಜಾರಿಗೆ ತಂದಿದೆ.

ಈ ನಿಷೇಧವು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರಿಗೆ ಪ್ರವೇಶಿಸಬಹುದಾದ ಖಾಸಗಿ ಕಟ್ಟಡಗಳಲ್ಲಿ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಚ್ಚಲು ಅನ್ವಯಿಸುತ್ತದೆ. ಆದಾಗ್ಯೂ ಇದು ಕೆಲವು ವಿನಾಯಿತಿಗಳನ್ನು ಅನುಮತಿಸುತ್ತದೆ.

ಗಮನಾರ್ಹವೇನೆಂದರೆ, ದಕ್ಷಿಣದಲ್ಲಿ ಟಿಸಿನೊ ಮತ್ತು ಉತ್ತರದಲ್ಲಿ ಸೇಂಟ್ ಗ್ಯಾಲನ್ ಎಂಬ ಎರಡು ಸ್ವಿಸ್ ಕ್ಯಾಂಟನ್ ಗಳು ಈಗಾಗಲೇ ಇದೇ ರೀತಿಯ ಕಾನೂನುಗಳನ್ನು ಹೊಂದಿವೆ. ಈ ರಾಷ್ಟ್ರೀಯ ಶಾಸನವು ಸ್ವಿಟ್ಜರ್ ಲ್ಯಾಂಡನ್ನು ಬೆಲ್ಜಿಯಂ ಮತ್ತು ಫ್ರಾನ್ಸ್ ನಂತಹ ಇತರ ದೇಶಗಳೊಂದಿಗೆ ಸಾಲಿನಲ್ಲಿ ತರುತ್ತದೆ. ಯಾಕೆಂದರೆ ಈ ರಾಷ್ಟ್ರದಲ್ಲಿ ಸಹ ಇದೇ ರೀತಿಯ ಕ್ರಮಗಳನ್ನು ಜಾರಿಗೆ ತಂದಿದೆ.

ಇತ್ತೀಚಿನ ಸುದ್ದಿ