ಮಹದೇವ್ ಬೆಟ್ಟಿಂಗ್ ಪ್ರಕರಣ: ಆರೋಪಿಗಳಿಗೆ ಆಸ್ಟ್ರೇಲಿಯಾ ಪ್ರವೇಶ ನಿರಾಕರಣೆ - Mahanayaka

ಮಹದೇವ್ ಬೆಟ್ಟಿಂಗ್ ಪ್ರಕರಣ: ಆರೋಪಿಗಳಿಗೆ ಆಸ್ಟ್ರೇಲಿಯಾ ಪ್ರವೇಶ ನಿರಾಕರಣೆ

23/09/2023

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಇಬ್ಬರು ಆರೋಪಿಗಳಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರಿಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಇವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ವಾಪಸ್ ಕಳುಹಿಸಲಾಯಿತು. ಮನಿ ಲಾಂಡರಿಂಗ್ ಆರೋಪದ ಮೇಲೆ ಇಬ್ಬರೂ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಅನೇಕ ರಾಜ್ಯಗಳ ಪೊಲೀಸರ ಕಣ್ಗಾವಲಿನಲ್ಲಿದ್ದಾರೆ.

ಮೂಲಗಳ ಪ್ರಕಾರ, ಚಂದ್ರಕರ್ ಮತ್ತು ಉಪ್ಪಲ್ ತಮ್ಮ ಕೆಲವು ಸಹಾಯಕರೊಂದಿಗೆ ಕಾರ್ಯಕ್ರಮದ ನಿಮಿತ್ತ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅವರು ಆಸ್ಟ್ರೇಲಿಯಾದ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರ ವಿರುದ್ಧ ಕ್ರಿಮಿನಲ್ ಮತ್ತು ಮನಿ ಲಾಂಡರಿಂಗ್ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಅವರಿಗೆ ದೇಶಕ್ಕೆ ಪ್ರವೇಶವನ್ನು ನಿರಾಕರಿಸಿದ್ದಾರೆ.

ಏನಿದು ಮಹಾದೇವ್ ಬೆಟ್ಟಿಂಗ್ ಪ್ರಕರಣ..?
ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಆನ್ಲೈನ್ ಕ್ಯಾಸಿನೊ ಮತ್ತು ಬೆಟ್ಟಿಂಗ್ ಪ್ಲಾಟ್ ಫ್ಲಾರ್ಮ್ ಗಳನ್ನು ಒದಗಿಸುವ ಮಹಾದೇವ್ ಬುಕ್ ಅಪ್ಲಿಕೇಶನ್ ಅಡಿಯಲ್ಲಿ ಅನೇಕ ವೆಬ್ ಸೈಟ್ ಗಳು ಮತ್ತು ಅಪ್ಲಿಕೇಶನ್‌ಗಳನ್ನು ತೆರೆದಿದ್ದರು. ಛತ್ತೀಸ್ ಗಢ ಮೂಲದ ಇವರಿಬ್ಬರು ದುಬೈನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ನಂಬಲಾಗಿದೆ.

ಭಾರತದಲ್ಲಿ ನಿಷೇಧಿಸಲಾಗಿದ್ದರೂ, ಮಹಾದೇವ್ ಅಪ್ಲಿಕೇಶನ್ ಇತರ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ಗೆ ಸಾಕಷ್ಟು ಪುರಾವೆಗಳನ್ನು ಕಂಡುಕೊಂಡಿದೆ. 417 ಕೋಟಿ ರೂ.ಗಳ ಅಪರಾಧದ ಆದಾಯವನ್ನು ಸ್ಥಗಿತಗೊಳಿಸಿದೆ ಅಥವಾ ವಶಪಡಿಸಿಕೊಂಡಿದೆ.

ತನಿಖಾ ಸಂಸ್ಥೆ ಮತ್ತು ಛತ್ತೀಸ್ ಗಢ ಪೊಲೀಸರು ಆಗಸ್ಟ್ ನಲ್ಲಿ ಇಬ್ಬರ ವಿರುದ್ಧ ಲುಕ್ಔಟ್ ಸುತ್ತೋಲೆ (ಎಲ್ಒಸಿ) ಹೊರಡಿಸಿದ್ದಾರೆ. ಅವರು ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸಿದರೆ ಎಲ್ಒಸಿ ಅವರ ಬಂಧನಕ್ಕೆ ಕಾರಣವಾಗಬಹುದು.

ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಸೌರಭ್ ಚಂದ್ರಕರ್ ಅವರ ವಿವಾಹದಲ್ಲಿ ಭಾಗವಹಿಸಿದ್ದಕ್ಕಾಗಿ ಟೈಗರ್ ಶ್ರಾಫ್, ಸನ್ನಿ ಲಿಯೋನ್, ನೇಹಾ ಕಕ್ಕರ್, ಆತಿಫ್ ಅಸ್ಲಂ ಮತ್ತು ರಾಹತ್ ಫತೇಹ್ ಅಲಿ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಕಲಾವಿದರು ಜಾರಿ ನಿರ್ದೇಶನಾಲಯದ ರೇಡಾರ್ ನಲ್ಲಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಸೆಲೆಬ್ರಿಟಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಕರೆಯಬಹುದು.

ಇತ್ತೀಚಿನ ಸುದ್ದಿ