ವೈಲ್ಡ್ ಕಾರ್ಡ್ ಎಂಟ್ರಿ ಹನುಮಂತು ನಿಜವಾಗಿಯೂ ಮುಗ್ಧನಾ? ಅಥವಾ ನಾಟಕನಾ? - Mahanayaka

ವೈಲ್ಡ್ ಕಾರ್ಡ್ ಎಂಟ್ರಿ ಹನುಮಂತು ನಿಜವಾಗಿಯೂ ಮುಗ್ಧನಾ? ಅಥವಾ ನಾಟಕನಾ?

hanumantu
22/10/2024

ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ ಹನುಮಂತ ಮುಗ್ಧನಂತೆ ವರ್ತಿಸುತ್ತಿರುವುದು ನಾಟಕ ಅಂತ ಬಿಗ್ ಬಾಸ್ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ವೀಕ್ಷಕರ ಅನುಮಾನಕ್ಕೆ ಕಾರಣವೂ ಇದೆ. ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಲ್ಲಿಂದಲೇ ಹನುಮಂತ ಅಮಾಯಕನಂತೆ, ತನಗೇನೂ ಗೊತ್ತಿಲ್ಲದ ಮುಗ್ಧನಂತೆ ನಾಟಕವಾಡುತ್ತಿದ್ದಾರೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದಂತೆಯೇ ಕ್ಯಾಪ್ಟನ್ ಆಗಿದ್ದ ಹನುಮಂತ,  ಬಿಗ್ ಬಾಸ್ ಸೂಚಿಸಿದಂತೆ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಅವರ ಸಾಮರ್ಥ್ಯದ ಮೇಲೆ 1 ರಿಂದ 14 ನಂಬರ್ ಕೊಡಲು ಹೇಳಲಾಗಿತ್ತು.  ಅದರಂತೆ ಹನುಮಂತ ತನಗೆ ಅನಿಸಿದಂತೆ ನಂಬರ್ ಕೊಟ್ಟಿದ್ದಾರೆ. ಈ ವಿಚಾರಕ್ಕೆ ಕೋಲಾಹಲ ಎದ್ದು, ಗಲಾಟೆ ನಡೆದು ಹನುಮಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಇದೆಲ್ಲ ಸರಿ, ಹೇಗೋ ನಡೆಯುತ್ತೆ ಎಂದು ಬಿಗ್ ಬಾಸ್ ವೀಕ್ಷಕರು ನೋಡುತ್ತಿದ್ದರು.

ಆದರೆ ಹನುಮಂತ ಇತ್ತೀಚೆಗೆ  ತಾನೊಬ್ಬ ಪೆದ್ದ ಎನ್ನುವಂತೆ ವರ್ತಿಸುತ್ತಿರುವುದು ಜನರಲ್ಲಿ ಅನುಮಾನಗಳಿಗೆ ಕಾರಣವಾಗಿದೆ. ಕ್ಯಾಪ್ಟನ್ ರೂಮಿನಲ್ಲಿದ್ದ ಹನುಮಂತನಿಗೆ ಧನರಾಜ್ ಬಂದು ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಕೆ ಮಾಡೋದು ಗೊತ್ತಾ? ಎಂದು ಪ್ರಶ್ನಿಸಿದ್ದಾರೆ. ಹನುಮಂತ, ಅದ್ರ ಮೇಲೆ ಕಾಲಿಟ್ಟು ಕೂತ್ಕೊಳ್ತೀನಿ ಅಂದಿದ್ದಾರೆ, ಅಷ್ಟೇ ಅಲ್ಲದೇ ನನಗೇನು ಅರ್ಥ ಆಗಲ್ಲ ಅಂತಾನೂ ಹೇಳಿದ್ದಾರೆ. ಇನ್ನೊಂದು ಕಡೆ ಸ್ವಿಮ್ಮಿಂಗ್ ಪೂಲ್ ಹತ್ರ ಬಂದು ಅಲ್ಲಿದ್ದ ಮಹಿಳಾ ಸ್ಪರ್ಧಿಗಳಿಗೆ ನೀವು ಒಳಗೆ ಹೋಗಿ ನಾನು ಜಳಕ ಮಾಡಬೇಕು ಎಂದಿದ್ದಾರೆ. ಸೋಪು, ಶಾಂಪೂ ಹಾಕಿ ಸ್ನಾನ ಮಾಡ್ಬೇಕು ಎಂದೂ ಹೇಳುತ್ತಾರೆ.

ವೀಕ್ಷಕರ ಪ್ರಶ್ನೆ ಏನು?

ಹನುಮಂತ ಕಳೆದ ಐದು ವರ್ಷಗಳಿಂದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.  ಆಧುನಿಕತೆಯ ಜೊತೆಗೆ ಬದುಕಿದ್ದಾರೆ. ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು ಎನ್ನುವುದು ಗೊತ್ತಿಲ್ಲ ಎನ್ನುವಷ್ಟುಅವರು ಮುಗ್ಧರೇ? ಹನುಮಂತು ನಿಜವಾಗ್ಲೂ ಮುಗ್ಧನಾ ಎಷ್ಟೊಂದು ರಿಯಾಲಿಟಿ ಶೋ ಅಟೆಂಡ್ ಮಾಡಿದ್ದಾರೆ ಕಾಮನ್ ಸೆನ್ಸ್ ಬರಲ್ವಾ?  ಬೆಂಗಳೂರಿನಂತಹ ಪ್ರದೇಶದಲ್ಲಿ ವೆಸ್ಟರ್ನ್ ಟಾಯ್ಲೆಟ್ ಗಳೇ ಹೆಚ್ಚು ಕಂಡು ಬರುತ್ತವೆ. ಇದು ಕೂಡ ಗೊತ್ತಿಲ್ಲ ಎನ್ನುವುದು ನಂಬುವಂತಹ ವಿಚಾರವೇ ಅಂತ ಪ್ರಶ್ನಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ಸಂದರ್ಭದಲ್ಲಿ ಹನುಮಂತುಗೆ ಇದ್ದ ಬೆಂಬಲ, ತನ್ನ ಸುಳ್ಳು ಮುಖದ ಮುಗ್ಧ ಭಾವನೆಯನ್ನು ತೋರ್ಪಡಿಸಿ ಕಳೆದುಕೊಂಡರೇ ಎನ್ನುವ ಅನುಮಾನಗಳು ಸೃಷ್ಟಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ