ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಪೋಲೆಂಡ್ ಗೆ ತೆರಳಿದ್ದಾರೆ. ಅಲ್ಲಿ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ಡುಡಾ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಮಾತುಕತೆ ನಡೆಸಲಿದ್ದಾರೆ. ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ ಗೆ ಭೇಟಿ ನೀಡುತ್ತಿರುವುದು ...
ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ ನಲ್ಲಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಗೆ ಜ್ಯೋತಿಯನ್ನು ರವಾನಿಸಲಾಗಿದ್ದರೂ, ಡೆಮಾಕ್ರಟಿಕ್ಗಳ ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದರು. ಕಮಲಾ ಹ್ಯಾರಿಸ್ ಮತ್ತು ಟಿಮ್ ವಾಲ್ಜ್ ಬ್ಲೂ-ಕಾಲರ್ ಕಾರ್ಮಿಕರ ಯೋಗಕ್ಷೇಮಕ್ಕೆ ಬದ್ಧರಾಗಿರುವ ನಾಯಕರು...
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ಅವರ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲು ಬ್ಯಾಂಕುಗಳಿಗೆ ಆದೇಶಿಸಿದ 17 ವರ್ಷಗಳ ನಂತರ ಬಾಂಗ್ಲಾದೇಶದ ತೆರಿಗೆ ಅಧಿಕಾರಿಗಳು ಅವರ ಬ್ಯಾಂಕ್ ಖಾತೆಗಳನ್ನು ಮುಕ್ತಗೊಳಿಸಲು ನಿರ್ಧರಿಸಿದ್ದಾರೆ. ಬಿಎನ್ ಪಿ ಅಧ್ಯಕ್ಷೆ ಜಿಯಾ ಅವರ ಖಾತೆಗಳನ್ನು ಮುಕ್ತಗೊಳಿಸುವಂತೆ ರಾಷ್ಟ್ರೀಯ ಕಂದಾಯ...
ಜೈಲಿನಲ್ಲಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಮುಂದಿನ ಕುಲಪತಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಪಿಟಿಐ ಪ್ರಕಟಿಸಿದೆ. ಸದ್ಯ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಖಾನ್, ಕಾನೂನು ತೊಡಕುಗಳ ಹೊರತಾಗಿಯೂ ಪ್ರತಿಷ್ಠಿತ ಸ್ಥಾನವನ್ನು ...
ಜಗತ್ತಿನಲ್ಲಿಯೇ ಅತಿ ದೊಡ್ಡದೆಂದು ಹೇಳಲಾಗುವ ಖರ್ಜೂರ ಹಬ್ಬ ಸೌದಿ ಅರೇಬಿಯಾದಲ್ಲಿ ಆರಂಭವಾಗಿದೆ. ಸೌದಿ ಅರೇಬಿಯಾದ ಅಲ್ ಖಸೀಮ್ ಪ್ರದೇಶದಲ್ಲಿ ಈ ಹಬ್ಬ ನಡೆಯುತ್ತಿದೆ. ಇಲ್ಲಿಂದ ಟನ್ನುಗಟ್ಟಲೆ ಖರ್ಜೂರವನ್ನು ಜಗತ್ತಿನ ನೂರಕ್ಕಿಂತಲೂ ಅಧಿಕ ರಾಷ್ಟ್ರಗಳಿಗೆ ರವಾನಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ಪ್ರತಿದಿನ ಟನ್ ಗಟ್ಟಲೆ ಖರ್ಜೂರದ...
ತಾನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿರುವ ಹಮಾಸ್ ನ ಸಶಸ್ತ್ರ ವಿಭಾಗವಾದ ಅಲ್ ಕಸ್ಸಾಮ್ ಬ್ರಿಗೇಡ್ ನ ಮುಖ್ಯಸ್ಥ ಮುಹಮ್ಮದ್ ದೈಫ್ ಅವರು ಸುರಕ್ಷಿತವಾಗಿದ್ದಾರೆ ಎಂದು ಹಮಾಸ್ ಹೇಳಿದೆ. ತನ್ನ ಅತಿಕ್ರೂರ ದಾಳಿಯನ್ನು ಸಮರ್ಥಿಸುವುದಕ್ಕಾಗಿ ಅದು ಮುಹಮ್ಮದ್ ದೈಫ್ ಅವರ ಹತ್ಯೆಯ ಬಗ್ಗೆ ಸುಳ್ಳು ವದಂತಿಯನ್ನು ಹಬ್ಬಿಸುತ್ತಿದೆ ಎಂದು ಹಮಾಸ...
ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಳೆದ ಬುಧವಾರ ಬೆಳಗ್ಗೆ 5:45ಕ್ಕೆ ಲಾಂಪಾಸ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಮ...
ಲಂಡನ್ ನ ಹೋಟೆಲ್ ವೊಂದರಲ್ಲಿ ಏರ್ ಇಂಡಿಯಾದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು ಇದನ್ನು ಪ್ರಮುಖ ಅಂತರರಾಷ್ಟ್ರೀಯ ಸರಪಳಿ ನಿರ್ವಹಿಸುವ ಹೋಟೆಲ್ನಲ್ಲಿ ಒಳನುಸುಳುವಿಕೆಯ ಘಟನೆ ಎಂದು ಬಣ್ಣಿಸಿ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ವರದಿಗಳ ಪ್ರಕಾರ, ಲಂ...
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವೂರ್ ರಾಣಾ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಯಾಕೆಂದರೆ ಒಂಬತ್ತನೇ ಸರ್ಕ್ಯೂಟ್ ನ ಯುಎಸ್ ಮೇಲ್ಮನವಿ ನ್ಯಾಯಾಲಯವು ಅವರನ್ನು ಹಸ್ತಾಂತರಿಸುವ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿದೆ. "(ಭಾರತ-ಯುಎಸ್ ಹಸ್ತಾಂತರ...
ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದೆ. ಇದು ಕೋಲಾರದ ಟೊಮೆಟೊ ಬೆಲೆಯ ಮೇಲೆಯೂ ಪರಿಣಾಮ ಬೀರಿದೆ. ಬಾಂಗ್ಲಾಗೆ ಟೊಮೆಟೊ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ಬೆಲೆ ಕುಸಿದಿದೆ. ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಭಾರತದ ಪೂರ್ವ ರಾಜ್ಯ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಕೋಲಾರದಿಂ...