ಸಿಂಗಾಪುರ, ಬ್ರೂನಿ ದೇಶಕ್ಕೆ ಪ್ರಧಾನಿ ಭೇಟಿ: 'ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತೀರಿ' ಎಂದು ಕೇಳಿದ ಕಾಂಗ್ರೆಸ್ - Mahanayaka
4:17 AM Friday 13 - September 2024

ಸಿಂಗಾಪುರ, ಬ್ರೂನಿ ದೇಶಕ್ಕೆ ಪ್ರಧಾನಿ ಭೇಟಿ: ‘ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತೀರಿ’ ಎಂದು ಕೇಳಿದ ಕಾಂಗ್ರೆಸ್

03/09/2024

ಸಿಂಗಾಪುರ ಮತ್ತು ಬ್ರೂನಿ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರಳಿರುವಂತೆಯೇ ಕಾಂಗ್ರೆಸ್ ಅವರನ್ನು ಕುಟುಕಿದೆ. ಸದಾ ಪ್ರಯಾಣದಲ್ಲಿರುವ ಪ್ರಧಾನಿಯವರು ಯಾವಾಗ ಮಣಿಪುರಕ್ಕೆ ಮಾನವೀಯ ಭೇಟಿ ನೀಡುತ್ತಾರೆ ಎಂದು ಪ್ರಶ್ನಿಸಿದೆ.

ಬ್ರೂನಿ ಸುಲ್ತಾನರ ಕೋರಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾರೆ. ಹಾಗೆಯೇ ಅವರು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ.‌ ಮಣಿಪುರದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಪರಿಸ್ಥಿತಿ ಹದಗೆಟ್ಟು ಇವತ್ತಿಗೆ 16 ತಿಂಗಳುಗಳಾದವು. ನೂರಾರು ಮಂದಿ ಸಾವಿಗೀಡಾಗಿದ್ದಾರೆ.‌

ಸಾವಿರಾರು ಮಂದಿ ಮನೆ ಮಠವನ್ನ ಕಳಕೊಂಡಿದ್ದಾರೆ. ಮಾತ್ರವಲ್ಲ, ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಈ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವುದು ಯಾವಾಗ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಖಾರವಾಗಿ ಪ್ರಶ್ನಿಸಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ