ಜೀವದ ಹಂಗು ತೊರೆದು ಪ್ರಾಣ ರಕ್ಷಣೆ: ನೀರಲ್ಲಿ ಮುಳುಗುತ್ತಿದ್ದ 9 ಮಂದಿಯನ್ನು ಕಾಪಾಡಿದ ಖಾನ್

ನೀರಲ್ಲಿ ಮುಳುಗುತ್ತಿದ್ದ 9 ಮಂದಿಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಸುಭಾನ್ ಖಾನ್ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ತೆಲಂಗಾಣದ ಕಮ್ಮಮ್ ಜಿಲ್ಲೆಯ ಮುನ್ನೇರು ನದಿಗೆ ಅಡ್ಡವಾಗಿ ಕಟ್ಟಲಾಗಿರುವ ಪ್ರಕಾಶ್ನಗರ್ ಸೇತುವೆಯಲ್ಲಿ ಈ ಒಂಬತ್ತು ಮಂದಿ ಸಿಲುಕಿಕೊಂಡಿದ್ದರು. ಮಳೆ ನೀರು ಪ್ರವಾಹದಂತೆ ಏರಿ ಇವರು ಕೊಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಸುಭಾನ್ ಖಾನ್ ಅವರ ನೆರವಿಗೆ ಧಾವಿಸಿದ್ದಾರೆ.
ಈ ಒಂಬತ್ತು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಸರ್ಕಾರ ಪ್ರಯತ್ನಿಸಿತು. ಆದರೆ ಹೆಲಿಕಾಪ್ಟರ್ ಗೆ ನಿರ್ದಿಷ್ಟ ಜಾಗಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸುಭಾನ್ ಖಾನ್ ಬುಲ್ಡೋಜರ್ ನೊಂದಿಗೆ ಸಿದ್ಧವಾದರು. ಇತರರು ಹಾಗೆ ಮಾಡದಂತೆ ಅವರನ್ನು ತಡೆದರು. ಆದರೆ ಸುಭಾನ್ ಖಾನ್ ಹಿಂಜರಿಯಲಿಲ್ಲ. ಒಂದು ವೇಳೆ ನಾನು ಸತ್ತರೆ ಒಂದು ಜೀವ ಮಾತ್ರ ನಷ್ಟವಾಗುತ್ತೆ.
ಆದರೆ ನಾನು ಮರಳಿ ಬಂದರೆ 10 ಮಂದಿಯ ಜೀವ ಉಳಿಯುತ್ತೆ ಎಂದು ಸುಭಾನ್ ಖಾನ್ ಹೇಳಿ ಬುಲ್ಡೋಜರ್ ನೊಂದಿಗೆ ಸೇತುವೆಗೆ ಹೋದರು. ಮಾತ್ರವಲ್ಲ ಒಂಬತ್ತು ಮಂದಿಯೊಂದಿಗೆ ಮರಳಿದರು. ಸುಭಾನ್ ಖಾನ್ ಒಂಬತ್ತು ಮಂದಿಯನ್ನು ರಕ್ಷಿಸಿ ಕರೆ ತಂದಾಗ ಭಾರಿ ಉದ್ಘಾರ ದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth