ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ಮತ್ತಷ್ಟು ವಿಳಂಬವಾಗಲಿದೆ: ಬೋಯಿಂಗ್ ಸ್ಟಾರ್ ಲೈನರ್ ನಿಂದ ವಿಚಿತ್ರ ಶಬ್ದ!

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ತಾಂತ್ರಿಕ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ಇಬ್ಬರೂ ಗಗನಯಾತ್ರಿಗಳು ಫೆಬ್ರವರಿ 2025 ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಇವರು ಭೂಮಿಗೆ ಮರಳಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆಯಂತೆ.
ಜೂನ್ 6 ರಂದು ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನೀತಾ ಮತ್ತು ವಿಲ್ಮೋರ್ ತೆರಳಿದ್ದರು. ವಿಜ್ಞಾನಿಗಳ ಲೆಕ್ಕಚಾರ ಪ್ರಕಾರ ಜೂನ್ 14ರಂದು ಇವರು ಭೂಮಿಗೆ ಮರಳಬೇಕಿತ್ತು.
ಆದರೆ, ಹೀಲಿಯಂ ಸೋರಿಕೆಯಿಂದಾಗಿ ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ಅವರು ಭೂಮಿಗೆ ಮರಳಲು ಸಾಧ್ಯವಾಗದೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ವಾಸ್ತವ್ಯ ಹೂಡುವಂತಾಗಿದೆ.
ಆರ್ಸ್ ಟೆಕ್ನಿಕಾ ತನ್ನ ವರದಿಯಲ್ಲಿ ರೋಡ್ಸ್‌ನಲ್ಲಿರುವ ಗಗನಯಾತ್ರಿ ವಿಲ್ಮೋರ್ ಬಾಹ್ಯಾಕಾಶ ಕೇಂದ್ರದಲ್ಲಿ ಮಿಷನ್ ಕಂಟ್ರೋಲ್‌ಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಬಹಿರಂಗಪಡಿಸಿತ್ತು. ವಿಲ್ಮೋರ್ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನನಗೆ ಸ್ಟಾರ್ ಲೈನರ್ ಬಗ್ಗೆ ಪ್ರಶ್ನೆ ಇದೆ. ಅದರ ಸ್ಪೀಕರ್ನಿಂದ ವಿಚಿತ್ರವಾದ ಶಬ್ದ ಬರುತ್ತಿದೆ. ಅದು ಏಕೆ ಅಂತಹ ಶಬ್ದ ಮಾಡುತ್ತಿದೆ ಎಂದು ನನಗೆ ತಿಳಿದಿಲ್ಲ. ನಾನು ಸ್ಟಾರ್ ಲೈನರ್ ನಲ್ಲಿ ತಿರುಗಾಡುತ್ತಿದ್ದಾಗ ಸ್ಪೀಕರ್ನಿಂದ ಈ ವಿಚಿತ್ರ ಶಬ್ದ ಬರುತ್ತಿರುವುದನ್ನು ಗಮನಿಸಿದ್ದೇನೆ ಎಂದು ವಿಲ್ಮೋರ್ ಸಂದೇಶವನ್ನು ಕಳುಹಿಸಿದ್ದಾರಂತೆ. ಈ ಸಂದೇಶವನ್ನು ಹವಾಮಾನಶಾಸ್ತ್ರಜ್ಞ ರಾಬ್ ಡೇಲ್ ಅವರು ಆರ್ಸ್ ಟೆಕ್ನಿಕಾ ಅವರೊಂದಿಗೆ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಶಬ್ದದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: