ಇಸ್ರೇಲ್ ಸೇನೆಗೆ ಖಡಕ್ ಎಚ್ಚರಿಕೆ ನೀಡಿದ ಹಮಾಸ್..!
ನಮ್ಮ ಒತ್ತೆಯಲ್ಲಿರುವ ಬಂಧಿಗಳನ್ನು ಇಸ್ರೇಲಿ ಸೇನೆ ಬಲವಂತದಿಂದ ಬಿಡಿಸಲು ಬಂದರೆ ಅವರು ಒತ್ತೆಯಾಳುಗಳನ್ನು ಶವಪೆಟ್ಟಿಗೆಯಲ್ಲಿ ಕೊಂಡೊಯ್ಯಬೇಕಾದೀತು ಎಂದು ಹಮಾಸ್ ಎಚ್ಚರಿಸಿದೆ. ಹಮಾಸ್ ನ ಸಶಸ್ತ್ರ ವಿಭಾಗವಾದ ಅಲ್ ಕಸ್ಸಾಮ್ ಬ್ರಿಗೇಡ್ ನ ವಕ್ತಾರ ಅಬೂ ಉಬೈದಾ ಅವರ ಹೇಳಿಕೆಯನ್ನು ವಿವಿಧ ಮಾಧ್ಯಮಗಳು ಪ್ರಕಟಿಸಿವೆ.
ಇಸ್ರೇಲ್ ಬಾಂಬ್ ಆಕ್ರಮಣದ ಮೂಲಕ ಸಾವಿರಾರು ಫೆಲೆಸ್ತೀನಿಯರನ್ನು ಕೊಂದಿದೆ. ಅಸಂಖ್ಯಾ ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ. ಒತ್ತೆಯಾಳುಗಳ ಹಸ್ತಾಂತರದ ವಿಷಯದಲ್ಲಿ ನಾಟಕವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಒತ್ತೆಯಾಳುಗಳ ಸಾವಿಗೆ ಸಂಪೂರ್ಣ ಹೊಣೆಯನ್ನು ಪ್ರಧಾನಿ ನೇತಾನ್ಯಾಹು ಅವರೇ ವಹಿಸಿಕೊಳ್ಳಬೇಕು.
ಕದನ ವಿರಾಮ ಒಪ್ಪಂದದ ಬದಲು ಬಲವಂತದಿಂದ ನಾನು ಒತ್ತೆಯಾಗಳನ್ನು ಬಿಡಿಸಿಕೊಳ್ಳುತ್ತೇನೆ ಎಂದು ಅವರು ಹೊರಡುವುದಾದರೆ ಅವರು ಒತ್ತೆಯಾಳುಗಳ ಶಾವಪೆಟ್ಟಿಗೆಯೊಂದಿಗೆ ಹೊರಡಬಹುದು ಎಂದು ಅಬೂ ಉಬೈದ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಹಮಾಸ್ ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿದ್ದ ಆರು ಮಂದಿಯ ಮೃತ ದೇಹವನ್ನು ಪತ್ತೆಹಚ್ಚಲಾಗಿತ್ತು. ಇದರ ಬೆನ್ನಿಗೆ ಇಸ್ರೇಲ್ ನಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿತ್ತು. ಹಮಾಸ್ ನ ಜೊತೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳದ ನೇತಾನ್ಯಾಹು ಅವರು ಪದತ್ಯಾಗ ಮಾಡಬೇಕು ಎಂದು ಇಸ್ರೇಲಿಗರು ಒತ್ತಾಯಿಸಿದ್ದರು.. ಇದರ ಬೆನ್ನಿಗೆ ಹಮಾಸ್ ಈ ಹೇಳಿಕೆಯನ್ನು ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth