ಪೊಲೀಸರ ಮೇಲೆ ರಾಡ್ ಬೀಸಿದ ದನಗಳ್ಳರು: ಹೈಟೆಕ್ ಕಾರಿನಲ್ಲಿ ದನ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್ - Mahanayaka
11:09 AM Saturday 30 - August 2025

ಪೊಲೀಸರ ಮೇಲೆ ರಾಡ್ ಬೀಸಿದ ದನಗಳ್ಳರು: ಹೈಟೆಕ್ ಕಾರಿನಲ್ಲಿ ದನ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

chikkamagaluru
11/07/2025


Provided by

ಚಿಕ್ಕಮಗಳೂರು: ಹೈಟೆಕ್ ಕಾರು ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡುತ್ತಿದ್ದ ದನಗಳ್ಳರನ್ನು ಅಡ್ಡಗಟ್ಟಿದ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೈಟೆಕ್ ಕಾರು ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ದನಗಳ್ಳರನ್ನು ಚೇಸ್ ಮಾಡಿದ ಪೊಲೀಸರು ಕಾರನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಪೊಲೀಸರ ಮೇಲೆಯೇ ದನಗಳ್ಳರು ರಾಡ್  ಬೀಸಿ, ತಪ್ಪಿಸಿಕೊಂಡು  ಕಾರು ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳು ಪರಾರಿಯಾದರೂ ಬಿಡದ ಪೊಲೀಸರು ಮಧ್ಯರಾತ್ರಿವರೆಗೆ ಹುಡುಕಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕಾರು, ರಾಡ್ 4 ಮೊಬೈಲ್ ಹಾಗೂ ಸಾಗಾಟ ಮಾಡುತ್ತಿದ್ದ 4 ಹಸುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ