ಲಿಫ್ಟ್ ನೊಳಗೆ 12 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿ, ಕಚ್ಚಿದ ವ್ಯಕ್ತಿ! - Mahanayaka

ಲಿಫ್ಟ್ ನೊಳಗೆ 12 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿ, ಕಚ್ಚಿದ ವ್ಯಕ್ತಿ!

lift door
10/07/2025

ಥಾಣೆ(Mahanayaka): ವಸತಿ ಕಟ್ಟಡದ ಲಿಫ್ಟ್ ನೊಳಗೆ 12 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿ ಬಾಲಕನಿಗೆ ಥಳಿಸಿದ್ದಲ್ಲದೇ ಕೈಗೆ ಕಚ್ಚಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜುಲೈ 4 ರಂದು ಸಂಜೆ 5:00 ಗಂಟೆ ಸುಮಾರಿಗೆ ಅಂಬರ್ನಾಥ್ ಪೂರ್ವದ ಕಟ್ಟಡದಲ್ಲಿ ಬಾಲಕ ತನ್ನ 14 ನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಟ್ಯೂಷನ್‌ ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಕೈಲಾಶ್ ಥವಾನಿ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.  9 ನೇ ಮಹಡಿಯಲ್ಲಿ ಲಿಫ್ಟ್ ಗಾಗಿ ವ್ಯಕ್ತಿ ಕಾಯುತ್ತಿದ್ದ.  ಲಿಫ್ಟ್ ಓಪನ್ ಆಗುತ್ತಿದ್ದಂತೆಯೇ ಬಾಲಕ ಯಾರೂ ಇಲ್ಲ ಎಂದು ಭಾವಿಸಿ ಲಿಫ್ಟ್  ಬಾಗಿಲು ಕ್ಲೋಸ್ ಮಾಡಿದ್ದಾನೆ. ತಕ್ಷಣವೇ  ಹೊರಗೆ ಜನರಿದ್ದಾರೆ ಎಂದು ತಿಳಿದು ಬಾಗಿಲು ತೆರೆದಿದ್ದಾನೆ. ಇದರಿಂದ ಕೋಪಗೊಂಡ ಕೈಲಾಸ್ ಥವಾನಿ, ಲಿಫ್ಟ್ ಒಳಗೆ ಬಂದು ಬಾಲಕನಿಗೆ ಹಲ್ಲೆ ನಡೆಸಲು ಆರಂಭಿಸಿದ್ದಾನೆ.

ಹಲವು ಬಾರಿ ಬಾಲಕನ ಕಪಾಳಮೋಕ್ಷ ಮಾಡಿ, ಅವನ ಕೈಗಳನ್ನು ಹಿಡಿದು, ಪಿನ್ ಮಾಡಿ, ಕೈಯನ್ನು ಕಚ್ಚಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನನ್ನು ಹೊರಗೆ ನೋಡಿಕೊಳ್ಳುತ್ತೇನೆ ಎಂದು ಬಾಲಕನಿಗೆ ಬೆದರಿಕೆ ಹಾಕಿ ವ್ಯಕ್ತಿ ಸ್ಥಳರಿಂದ ತೆರಳಿದ್ದಾನೆ.

ಕೃತ್ಯ ನಡೆಯುವ ವೇಳೆ ಮನೆ ಕೆಲಸದ ಸಿಬ್ಬಂದಿಯೊಬ್ಬರು ಕೂಡ ಲಿಫ್ಟ್ ನೊಳಗಿದ್ದರು. ಅವರು ಬಾಲಕನಿಗೆ ಹೊಡೆಯದಂತೆ ತಡೆಯಲು ಮುಂದಾದರೂ ಕೇಳದ ವ್ಯಕ್ತಿ ಬಾಲಕನಿಗೆ ಹಲ್ಲೆ ನಡೆಸುತ್ತಲೇ ಇದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ