ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಗಾಗಿ ಪಿಜಿಗಳನ್ನು ಜಾಲಾಡಿದ ಪೊಲೀಸರು - Mahanayaka

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಗಾಗಿ ಪಿಜಿಗಳನ್ನು ಜಾಲಾಡಿದ ಪೊಲೀಸರು

06/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಮಹಿಳೆಗಾಗಿ  ಪೊಲೀಸರು ಹುಡುಕಾಟ ಆರಂಭಿಸಿದ್ದು,  ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಲ್ಲಿ  ಆರ್ ಟಿ ನಗರದ ಪಿಜಿಯೊಂದರಲ್ಲಿ ಯುವತಿ ಇದ್ದಳು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ  ಆರ್ ಟಿ ನಗರ ವ್ಯಾಪ್ತಿಯಲ್ಲಿರುವ 45 ಪಿ.ಜಿ.ಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Provided by

ಕಬ್ಬನ್ ಪಾರ್ಕ್ ಮತ್ತು ಆರ್ ಟಿ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪಿಜಿಯಲ್ಲಿದ್ದವರ ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು,  ಪಿ.ಜಿ.ರಿಜಿಸ್ಟರ್ ಹಾಗೂ ಲೆಡ್ಜರ್ ಪುಸ್ತಕಗಳ ಪರಿಶೀಲನೆ ವೇಳೆ ಯುವತಿಯ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಸಿಡಿ ಮತ್ತು ದಿನೇಶ್ ಕಲ್ಲಹಳ್ಳಿ ನೀಡಿರುವ ಮಾಹಿತಿಯನ್ನು ಆಧರಿಸಿ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಸಂತ್ರಸ್ತ ಯುವತಿ ಇಲ್ಲಿಯವರೆಗೆ ಪತ್ತೆಯಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ