ಸಿಡಿ ಲೇಡಿಯ ಮತ್ತೊಂದು ವಿಡಿಯೋ ಬಿಡುಗಡೆ! - Mahanayaka
10:20 PM Thursday 16 - October 2025

ಸಿಡಿ ಲೇಡಿಯ ಮತ್ತೊಂದು ವಿಡಿಯೋ ಬಿಡುಗಡೆ!

cd ledy
25/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾಳೆ. ಈ ಬಾರಿ 13 ನಿಮಿಷಗಳ ವಿಡಿಯೋವನ್ನು ಯುವತಿ ಹರಿಯಬಿಟ್ಟಿದ್ದಾಳೆ.


Provided by

ವಿಡಿಯೋದಲ್ಲಿ, ನನ್ನ ತಂದೆ, ತಾಯಿಯ ಸುರಕ್ಷತೆಯೇ ನನಗೆ ಮುಖ್ಯ ಅವರ ಸುರಕ್ಷತೆಯ ಬಗ್ಗೆ ನನಗೆ ನಂಬಿಕೆ ಬಂದರೆ, ತಾನು ಎಸ್ ಐಟಿ ಮುಂದೆ ಬರುತ್ತೇನೆ ಎಂದು ಹೇಳಿದ್ದಾಳೆ. ನಾನು ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಎಂದು ಹೇಳಿದ್ದಾಳೆ.

ನನ್ನ ತಂದೆ ತಾಯಿಗೆ ರಕ್ಷಣೆ ನೀಡುವಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಹಾಗೂ ಮಹಿಳಾ ಸಂಘಟನೆಗಳ ಬಳಿ ಕೇಳಿಕೊಳ್ಳುತ್ತೇನೆ. ನಾನು ಕಳೆದ ವಿಡಿಯೋವನ್ನು ಮಾರ್ಚ್ 12ರಂದು ಕಳುಹಿಸಿದ್ದೆ. ಆದರೆ ಅದು ಆ ದಿನ ಬಿಡುಗಡೆಯಾಗಿಲ್ಲ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು  ದೂರು ನೀಡಿದ ಬಳಿಕ ವಿಡಿಯೋ ರಿಲೀಸ್ ಆಗಿದೆ ಎಂದು ಆಕೆ ಹೇಳಿದ್ದಾಳೆ.

ಹಿಂದಿನ ದಿನವೇ ವಿಡಿಯೋ ಕಳುಹಿಸಲಾಗಿದ್ದರೂ, ರಮೇಶ್ ಜಾರಕಿಹೊಳಿ ದೂರು ನೀಡಿ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆಯಾಗಿದೆ. ಇಲ್ಲಿ ಏನು ನಡೆಯುತ್ತಿದೆ? ಎಸ್ ಐಟಿ ಯಾರ ಪರವಾಗಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಆಕೆ ಎಸ್ ಐಟಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾಳೆ.

ಇದನ್ನು ಓದಿ:

ಸಿಎಂ ಯಡಿಯೂರಪ್ಪ ಮಹಿಳೆಯ ಕೈ ಹಿಡಿದುಕೊಂಡಿರುವ ವಿಡಿಯೋ ವೈರಲ್!

ಇತ್ತೀಚಿನ ಸುದ್ದಿ