ಮೋದಿಜಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚು!
 
	
	
	
	
	
ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನಾಚರಣೆಯಾಗಿದ್ದು, ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ವಿಭಿನ್ನವಾಗಿ ಹುಟ್ಟು ಹಬ್ಬ ಆಚರಣೆಯನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಕೂಡ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಟ್ರೆಂಡಿಂಗ್ ನಲ್ಲಿದೆ. ಆದರೆ, ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚಾಗಿ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದೆ.
ಮೋದಿ ಹುಟ್ಟು ಹಬ್ಬದಂದು ಟ್ವಿಟ್ಟರ್ ನಲ್ಲಿ ರಾಷ್ಟ್ರೀಯ ಬೇರೋಜ್ ಗಾರ್ ದಿವಸ್, ನ್ಯಾಷನಲ್ ಅನ್ ಎಂಪ್ಲಾಯ್ಮೆಂಟ್ ಡೇ, ಮೋದಿ ರೋಜ್ ಗಾರ್ ದೋ ಎಂಬ ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯವರೆಗೆ ಟ್ವೀಟ್ ಮಾಡಿದ ಅಂಕಿ ಅಂಶಗಳ ಪೈಕಿ ಹ್ಯಾಪಿ ಬರ್ತ್ ಡೇ ಮೋದಿ ಜೀ ಎಂಬ ಹ್ಯಾಷ್ ಟ್ಯಾಗ್ ನ್ನು ಬಳಸಿ 3.92 ಲಕ್ಷ ಮಂದಿ ಟ್ವೀಟ್ ಮಾಡಿದ್ದಾರೆ. ಆದರೆ ಉದ್ಯೋಗ ಕೇಳಿ ವಿವಿಧ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದವರ ಸಂಖ್ಯೆ ಬರೋಬ್ಬರಿ 23.51 ಲಕ್ಷಕ್ಕೂ ಅಧಿಕವಾಗಿದೆ ಎಂದು ವರದಿಯಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ ಜಿ ಅವರ ಹುಟ್ಟು ಹಬ್ಬದಂದು ಶುಭ ಹಾರೈಸಿದವರ ಸಂಖ್ಯೆಗಿಂತಲೂ ಹೆಚ್ಚು ಉದ್ಯೋಗ ಕೇಳಿದವರೇ ಹೆಚ್ಚು ಎಂದು ಈ ಟ್ವೀಟ್ ಗಳ ಆಧಾರದಲ್ಲಿ ವಿಪಕ್ಷಗಳು ಕೂಡ ಟೀಕಿಸಿವೆ. ಇಂದು ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಆಚರಣೆಯನ್ನು ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿಯೇ ಇನ್ನೊಂದೆಡೆಯಲ್ಲಿ ಈ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ವಿವಿಧ ಪಕ್ಷ ಸಂಘಟನೆಗಳು ದೇಶಾದ್ಯಂತ ಆಚರಿಸಿದೆ. ಟ್ವಿಟ್ಟರ್ ನಲ್ಲಿಯೂ ಇದು ಪ್ರತಿಫಲಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ಇನ್ನಷ್ಟು ಸುದ್ದಿಗಳು…
ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವನಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು!
ಭಯಾನಕ ಘಟನೆ: ಜೋಡಿಯನ್ನು ದೆಹಲಿಯಿಂದ ಅಪಹರಿಸಿ, ಮಧ್ಯಪ್ರದೇಶದಲ್ಲಿ ಹತ್ಯೆ ಮಾಡಿ ವಿಭಿನ್ನ ರಾಜ್ಯಗಳಲ್ಲಿ ಎಸೆದ ಪಾಪಿಗಳು
ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ, ಹಲ್ಲೆ | ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್!
ಚಲಿಸುತ್ತಿರುವ ರೈಲಿನಲ್ಲಿ ಹುಚ್ಚಾಟ ಮೆರೆದ ಯುವಕರು!
ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ
ತಲೆಗೆ ಗುಂಡು ಹಾರಿಸಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ: ಆತ್ಮಹತ್ಯೆಯೋ?, ಕೊಲೆಯೋ? ಎಂಬ ಶಂಕೆ!
ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಿ | ದೇವದಾಸ್ ಕಾಪಿಕಾಡ್ ಒತ್ತಾಯ
4.3 ಕೋಟಿ ವರ್ಷಗಳ ಹಿಂದಿನ ನಾಲ್ಕು ಕಾಲಿನ ಬೃಹತ್ ತಿಮಿಂಗಲ ಪತ್ತೆ!
ಮಸೀದಿ, ಚರ್ಚ್, ದೇವಸ್ಥಾನ ಅಂತ ಇಲ್ಲ, ಯಾವುದೇ ಇದ್ದರೂ ತೆರವು ಮಾಡುತ್ತೇವೆ | ರಾಮನಗರ ಡಿಸಿ





 
 























