ತುಮಕೂರಿನ ಗೊಲನ ಎಂಟರ್ ಪ್ರೈಸಸ್ ಗೆ ಕೇಂದ್ರ ಸರ್ಕಾರದ ಮಾನ್ಯತೆ

Mahanayaka–ತುಮಕೂರು: ತುಮಕೂರಿನ ಗೊಲನ ಎಂಟರ್ ಪ್ರೈಸಸ್(Golana Enterprises) ಉದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದು, ಕೇಂದ್ರ ಸರ್ಕಾರದ ಮಾನ್ಯತೆಯನ್ನು ಪಡೆಯುವ ಮೂಲಕ ತುಮಕೂರು ಜಿಲ್ಲೆಗೆ ಹೆಮ್ಮೆ ತಂದಿದೆ.
ಗೊಲನ ಎಂಟರ್ ಪ್ರೈಸಸ್ ಸಂಸ್ಥೆಯ ಯಶಸ್ವಿಗೆ ಸಂಸ್ಥೆಯ ಸಂಸ್ಥಾಪಕರಾದ ನಟರಾಜು ಜಿ.ಎಲ್. ಅವರ ಪರಿಶ್ರಮ ಮತ್ತುಉದ್ಯೋಗ ಸೃಷ್ಟಿಯ ಸಾಮಾಜಿಕ ಕಳಕಳಿ ಕಾರಣವಾಗಿದೆ. ಕೇವಲ ಉದ್ಯಮವಾಗಿ ಅಲ್ಲದೇ ಉದ್ಯೋಗ ಸೃಷ್ಟಿಯ ಮೂಲಕ ಗೊಲನ ಎಂಟರ್ ಪ್ರೈಸಸ್ ಮಾದರಿಯಾಗಿದೆ. 2016ರಲ್ಲಿ ಆರಂಭವಾದ ಸಂಸ್ಥೆಯು ಕಾರ್ಮಿಕರ ನಿಯೋಜನೆ, ಗೃಹ ಸಹಾಯ ಸೇವೆ, ಲೋಡಿಂಗ್-ಅನ್‌ಲೋಡಿಂಗ್, ತೋಟಗಾರಿಕೆ, ರಸ್ತೆ ಹಾಗೂ ಶೌಚಾಲಯ ಶುದ್ಧೀಕರಣ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ, ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.
ಕೇಂದ್ರ ಸರ್ಕಾರದ ಮಾನ್ಯತೆ:
ಗೊಲನ ಎಂಟರ್ ಪ್ರೈಸಸ್, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಇವರಿಂದ ಗೌರವಪೂರ್ಣ ಪ್ರಮಾಣಪತ್ರವನ್ನು ಪಡೆದಿದೆ. ಸಮಯಕ್ಕೆ ಸರಿಯಾಗಿ ಜಿಎಸ್ ಟಿ ತೆರಿಗೆ ಪಾವತಿಸಿ, ಶಿಸ್ತಿನ ಮಾದರಿಯಾಗಿ ನಡೆದುಕೊಂಡಿರುವುದಕ್ಕಾಗಿ ಈ ಮಹತ್ವದ ಮಾನ್ಯತೆಯನ್ನು ನೀಡಲಾಗಿದೆ. ಇದು ಗೊಲನ ಎಂಟರ್ ಪ್ರೈಸಸ್ ಸಂಸ್ಥೆಯು ವಿಶ್ವಾಸಾರ್ಹ ಹಾಗೂ ಶಿಸ್ತಿನ ಉದ್ಯಮಗಳ ಸಾಲಿನಲ್ಲಿ ಸೇರಿಕೊಂಡಿರುವ ಹೆಮ್ಮೆಯ ಕ್ಷಣವಾಗಿದೆ.
ನೈಜ ಉದ್ಯಮದ ಮಾನ್ಯತೆ:
ಈ ಪ್ರಮಾಣಪತ್ರ ಕೇವಲ ಗೌರವಪತ್ರವಲ್ಲ, ಅದು ಶಿಸ್ತು, ನೈತಿಕತೆ ಮತ್ತು ಆಡಳಿತ ಜವಾಬ್ದಾರಿಯ ಚಿಹ್ನೆ. ಸಾಮಾನ್ಯವಾಗಿ ದೊಡ್ಡ ಉದ್ಯಮಗಳಿಗೆ ಮಾತ್ರ ಸಿಗುವ ಈ ಗೌರವವನ್ನು ಒಂದು ಸಣ್ಣ ಮತ್ತು ಮಧ್ಯಮ ಉದ್ಯಮ ಗಳಿಸಿರುವುದು ಮಹತ್ವದ ಸಾಧನೆ. ಸರಕಾರದ ನಂಬಿಕೆಗೆ ಪಾತ್ರವಾಗಲು ಪ್ರಾಮಾಣಿಕತೆ ಮತ್ತು ಶಿಸ್ತೇ ಮುಖ್ಯ ಎಂಬುದಕ್ಕೆ ಗೊಲನ ಎಂಟರ್ ಪ್ರೈಸಸ್ ಉದಾಹರಣೆಯಾಗಿದೆ.
ಶ್ರಮ ಮತ್ತು ತ್ಯಾಗದ ಪ್ರತಿಫಲ:
ಗೊಲನ ಎಂಟರ್ ಪ್ರೈಸಸ್ ಕೇಂದ್ರ ಸರ್ಕಾರದ ಮಾನ್ಯತೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಮಾತನಾಡಿದ ನಟರಾಜ್ ಜಿ.ಎಲ್., “ಈ ಪ್ರಮಾಣ ಪತ್ರವು ಗೊಲನ ಎಂಟರ್ ಪ್ರೈಸಸ್ ನ ನಿಷ್ಠೆ, ಶ್ರಮ ಮತ್ತು ತ್ಯಾಗಕ್ಕೆ ದೊರಕಿದ ಪ್ರತಿಫಲವಾಗಿದೆ ಎಂದರು.
ನಮ್ಮ ಸಿಬ್ಬಂದಿ, ಗ್ರಾಹಕರು ಹಾಗೂ ಎಲ್ಲ ಸಹಭಾಗಿಗಳಿಗೆ ಈ ಗೌರವವನ್ನು ಸಮರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಹೆಚ್ಚು ನಿಷ್ಠೆಯಿಂದ, ಹೆಚ್ಚು ನವೀನತೆಯಿಂದ ಜನಸೇವೆಯಲ್ಲಿ ಹಾಗೂ ತೆರಿಗೆ ಶಿಸ್ತಿನಲ್ಲಿ ಮುಂದುವರೆಯುತ್ತೇವೆ ಎಂದು ಅವರು ತಿಳಿಸಿದರು.
ಗೊಲನ ಎಂಟರ್ ಪ್ರೈಸಸ್ ಗೆ ಕೇಂದ್ರ ಸರ್ಕಾರದ ಮಾನ್ಯತೆಯ ಪ್ರಮಾಣ ಪತ್ರವನ್ನು ಗೊಲನ ಎಂಟರ್ ಪ್ರೈಸಸ್ ಸಂಸ್ಥೆಯ ಕಚೇರಿಯಲ್ಲಿ ಗೌರವ ಪೂರ್ವಕವಾಗಿ ಪ್ರದರ್ಶಿಸಲಾಗಿದೆ. ಇದು ಕೇವಲ ಸಂಸ್ಥೆಗೆ ಹೆಮ್ಮೆ ತರುವ ವಿಷಯವಲ್ಲ, ಇಡೀ ತುಮಕೂರಿಗೆ ಹೆಮ್ಮೆ ತರುವ ವಿಚಾರವಾಗಿದೆ. ಸರಿಯಾದ ಸಮಯದಲ್ಲಿ ತೆರಿಗೆ ಪಾವತಿ, ಶಿಸ್ತು ಪಾಲನೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತವೆ. ಈ ಸಾಲಿಗೆ ತುಮಕೂರಿನ ಗೊಲನ ಎಂಟರ್ ಪ್ರೈಸಸ್ ಕೂಡ ಸೇರಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: