ಕೃಷಿ ಕಾಯ್ದೆ ವಾಪಸ್ ಹೇಳಿಕೆ ನೀಡಿಯೇ ಇಲ್ಲ: ಕೇಂದ್ರ ಸಚಿವ ತೋಮರ್ - Mahanayaka

ಕೃಷಿ ಕಾಯ್ದೆ ವಾಪಸ್ ಹೇಳಿಕೆ ನೀಡಿಯೇ ಇಲ್ಲ: ಕೇಂದ್ರ ಸಚಿವ ತೋಮರ್

narendra singh tomar
26/12/2021


Provided by

ನವದೆಹಲಿ: ಕೃಷಿ ಕಾಯ್ದೆಯನ್ನು ವಾಪಸ್ ತರುವ ಕುರಿತು ತಾವು ಹೇಳಿಕೆ ನೀಡಿಯೇ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೋಮರ್, ಮತ್ತೆ ತಿದ್ದುಪಡಿಗಳೊಂದಿಗೆ ಕೃಷಿ ಕಾಯ್ದೆಯನ್ನು ತರುತ್ತೇವೆ ಎಂದು ಹೇಳಿದ್ದರು. ಕೃಷಿ ಕಾನೂನುಗಳ ರದ್ದತಿಗೆ ಕೆಲವು ಜನರು ಕಾರಣ. ಸಂಸತ್ತಿನಲ್ಲಿ ಚರ್ಚೆಯ ಕೊರತೆಯೊಂದಿಗೆ ಆ ಮಹತ್ವದ ಕಾಯ್ದೆಗಳನ್ನು ರದ್ದುಗೊಳಿಸಲಾಯಿತು.

ದೇಶಕ್ಕೆ ಸ್ವತಂತ್ರ್ಯ ಬಂದ 70 ವರ್ಷಗಳ ಬಳಿಕ ಕೃಷಿ ವಿಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕಾನೂನು ತರಲು ಮುಂದಾಗಿತ್ತು. ಇದು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಹಿಡಿಸಲಿಲ್ಲ. ಹೀಗಾಗಿ ಕಾಯ್ದೆಗಳ ಕುರಿತು ಅಪಪ್ರಚಾರ ಮಾಡಿ ಅವುಗಳ ವಿರುದ್ಧ ಪ್ರತಿಭಟಿಸುವಂತೆ ಮಾಡಿದರು. ಸರ್ಕಾರ ಇದರಿಂದ ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದಕ್ಕೆ ಹೋಗಿರಬಹುದು. ಆದರೆ ಅದಕ್ಕಿಂತ ವೇಗದಲ್ಲಿ ಮತ್ತೆ ಮುನ್ನುಗ್ಗುತ್ತೇವೆ. ನಾವು ಖಂಡಿತಾ ಮತ್ತೆ ಮುಂದುವರಿಯುತ್ತೇವೆ ಏಕೆಂದರೆ ರೈತರು ದೇಶದ ಬೆನ್ನೆಲುಬು ಎಂದು ಹೇಳಿದ್ದರು.

ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ರೈತಾಪಿ ವಲಯದಲ್ಲಿ ವ್ಯಾಪಕ ವಿರೋಧಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ತಾವು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ. ಇವೆಲ್ಲ ಅಪಪ್ರಚಾರ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

15ರಿಂದ 18 ವರ್ಷದೊಳಗಿನವರಿಗೆ ಜನವರಿ 3ರಿಂದ ಲಸಿಕೆ ವಿತರಣೆ ಆರಂಭ | ಪ್ರಧಾನಿ ಮೋದಿ

ಒಮಿಕ್ರಾನ್ ಭೀತಿ:  ಡಿಸೆಂಬರ್ 28ರಿಂದ 10 ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ!

ಅತಿಥಿ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು: ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ತೀರ್ಮಾನ

ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೇ ಬೇರೆ ದಾರಿಯಿಲ್ಲ | ಸಂಸದ ತೇಜಸ್ವಿ ಸೂರ್ಯ

ಕಳೆದ 7 ವರ್ಷಗಳಿಂದ ಮೋದಿ ಸರ್ಕಾರ ‘ಉತ್ತಮ ಆಡಳಿತ’ ನೀಡುತ್ತಿದೆ | ಅಮಿತ್ ಶಾ

ರಾಜಸ್ಥಾನ: ಮಿಗ್​-21 ಫೈಟರ್​ ಜೆಟ್​ ಪತನ; ಪೈಲಟ್​ ವಿಂಗ್​ ಕಮಾಂಡರ್ ಹುತಾತ್ಮ​

ಇತ್ತೀಚಿನ ಸುದ್ದಿ