ಸದನ ಕಲಾಪಕ್ಕೆ ಅಡ್ಡಿ ಆರೋಪ: ತಪ್ಪಾಗಿ ಡಿಎಂಕೆ ಸಂಸದನ ವಿರುದ್ಧ ಹೊರಡಿಸಿದ ಅಮಾನತು ಆದೇಶ ಹಿಂಪಡೆದ ಕೇಂದ್ರ ಸರ್ಕಾರ - Mahanayaka
6:15 AM Thursday 30 - October 2025

ಸದನ ಕಲಾಪಕ್ಕೆ ಅಡ್ಡಿ ಆರೋಪ: ತಪ್ಪಾಗಿ ಡಿಎಂಕೆ ಸಂಸದನ ವಿರುದ್ಧ ಹೊರಡಿಸಿದ ಅಮಾನತು ಆದೇಶ ಹಿಂಪಡೆದ ಕೇಂದ್ರ ಸರ್ಕಾರ

15/12/2023

ಲೋಕಸಭಾ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಡಿಎಂಕೆ ಸಂಸದ ಎಸ್‌.ಆರ್‌.ಪಾರ್ಥಿಬನ್‌ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಸಂಸತ್‌ನಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಒಟ್ಟು 14 ಮಂದಿ ಸಂಸದರು ಅಮಾನತುಗೊಂಡಿದ್ದರು. ಇದರಲ್ಲಿ ಡಿಎಂಕೆ ಸಂಸದ ಎಸ್‌.ಆರ್‌.ಪಾರ್ಥಿಬನ್‌ ಅವರ ಹೆಸರು ಇತ್ತು. ಆದರೆ ಪಾರ್ಥಿಬನ್‌ ಅವರು ಇಂದು ಸದನಕ್ಕೆ ಗೈರಾಗಿದ್ದರು. ಗದ್ದಲ ಉಂಟಾದಾಗ ಅವರು ದೆಹಲಿಯಲ್ಲೂ ಇರಲಿಲ್ಲ ಎಂಬುದು ತಿಳಿದುಬಂದಿದೆ.

ಕೆಲವು ಗಂಟೆಗಳ ನಂತರ ಅವರ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಗೊಂದಲವನ್ನು ನಿವಾರಿಸಲಾಗಿದೆ. ಅಲ್ಲದೇ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸಂಸದರನ್ನು ಗುರುತಿಸುವಲ್ಲಿ ಸಿಬ್ಬಂದಿಯಿಂದ ತಪ್ಪಾಗಿದೆ. ಅಮಾನತುಗೊಂಡ ಸಂಸದರ ಪಟ್ಟಿಯಿಂದ ಅವರ ಹೆಸರನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ