ಚಹಾ ಕುಡಿಯುತ್ತಿದ್ದ ವೇಳೆ ಹೃದಯಾಘಾತ | ಗ್ರಾ.ಪಂ. ಚುನಾವಣೆ ಸ್ಪರ್ಧಿ ಸಾವು - Mahanayaka

ಚಹಾ ಕುಡಿಯುತ್ತಿದ್ದ ವೇಳೆ ಹೃದಯಾಘಾತ | ಗ್ರಾ.ಪಂ. ಚುನಾವಣೆ ಸ್ಪರ್ಧಿ ಸಾವು

24/12/2020


Provided by

ಬೆಳಗಾವಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.

ಮಾರುತಿಗೌಡ ಭೀಮಗೌಡ(65) ಮೃತಪಟ್ಟವರಾಗಿದ್ದಾರೆ.  ಡಿಸೆಂಬರ್ 22ರಂದು ನಡೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಇವರು ಗ್ರಾಮದ ವಾರ್ಡ್ ನಂಬರ್ 3ರಲ್ಲಿ ಸ್ಪರ್ಧಿಸಿದ್ದರು.

ಇಂದು ಬೆಳಗ್ಗೆ ಚಹಾ ಕುಡಿಯುತ್ತಿದ್ದ ವೇಳೆ ಮಾರುತಿಗೌಡರಿಗೆ ಹೃದಯಾಘಾತವಾಗಿದೆ. ಪರಿಣಾಮವಾಗಿ ಅವರು ನಿಧನರಾಗಿದ್ದಾರೆ.

ಇತ್ತೀಚಿನ ಸುದ್ದಿ