ಒಂದೇ ದಿನದಲ್ಲಿ ಸ್ವರ್ಗವಾಸಿಗಳಿಗೆ ನರಕ ತೋರಿಸಿದ ಚೈತ್ರಾ ಕುಂದಾಪುರ! | ಬಿಗ್ ಬಾಸ್ ಸೀಸನ್ 11 - Mahanayaka
10:12 PM Thursday 21 - August 2025

ಒಂದೇ ದಿನದಲ್ಲಿ ಸ್ವರ್ಗವಾಸಿಗಳಿಗೆ ನರಕ ತೋರಿಸಿದ ಚೈತ್ರಾ ಕುಂದಾಪುರ! | ಬಿಗ್ ಬಾಸ್ ಸೀಸನ್ 11

chaithra kundapura
01/10/2024


Provided by

ಬಿಗ್ ಬಾಸ್ ಸೀಸನ್ 11 ಗೆ ಎಂಟ್ರಿ ನೀಡಿದ ಚೈತ್ರಾ ಕುಂದಾಪುರ ನರಕ ಸೇರಿದ್ದಾರೆ. ಆದ್ರೆ, ಅಕ್ಷರಶಃ ಪಕ್ಕದಲ್ಲೇ ಇರುವ ಸ್ವರ್ಗ ಲೋಕದ ಸ್ಪರ್ಧಿಗಳಿಗೆ ಚೈತ್ರಾ ಒಂದೇ ದಿನದಲ್ಲಿ ನರಕ ತೋರಿಸಿಬಿಟ್ಟಿದ್ದಾರೆ.

ನರಕವಾಸಿಗಳಿಂದ ನಾವು ಕೆಲಸ ಮಾಡಿಸುವ ಹಾಗೆ ಟಾಸ್ಕ್ ಕೊಡಿ ಅಂತ ಭವ್ಯ ಗೌಡ ಮನವಿ ಮಾಡ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಬಿಗ್ ಬಾಸ್ ಟಾಸ್ಕ್ ಕೊಡುತ್ತಾರೆ. ಅಲ್ಲಿಂದ ಚೈತ್ರಾ ಆಟ ಆರಂಭವಾಗುತ್ತದೆ.

ಮನೆ ಕೆಲಸದ ಜವಾಬ್ದಾರಿಯನ್ನ ನರಕದ ನಿವಾಸಿಗಳ ಮೇಲೆ ಹೇರಬೇಕು. ಸ್ವರ್ಗದ ಮನೆಯನ್ನು ಕ್ಲೀನ್ ಮಾಡಬೇಕು. ಇಬ್ಬರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ಎಂದಾಗ, ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರನ್ನ ಸ್ವರ್ಗದ ನಿವಾಸಿಗಳು ಆಯ್ಕೆ ಮಾಡ್ತಾರೆ.

ಮೊದಲು ನರಕದಲ್ಲಿ ಚರ್ಚೆಯಾಗುತ್ತದೆ. ನಾವು ಸರಿಯಾಗಿ ಕೆಲಸ ಮಾಡಿಲ್ಲವಾದ್ರೆ, ಸ್ವರ್ಗದವರೇ ಹೊಣೆಯಾಗ್ತಾರೆ, ಹಾಗಾಗಿ ನಾವು ಟೈಮ್ ವೇಸ್ಟ್ ಮಾಡೋಣ ಎನ್ನುವುದು ಅವರ ತೀರ್ಮಾನವಾಗಿತ್ತು.

ಅತ್ತ ಸ್ವರ್ಗದವರೂ ಮೀಟಿಂಗ್ ಮಾಡ್ತಾರೆ, ನರಕವಾಸಿಗಳು ನಮ್ಮ ಕೈಯಿಂದ ಮಿಸ್ಟೇಕ್ ಮಾಡಿಸಲು ಪ್ರಯತ್ನಿಸ್ತಾರೆ. ರೂಲ್ಸ್ ಬ್ರೇಕ್ ಮಾಡಲು, ಕೆಣಕಲು ಬರ್ತಾರೆ, ನಾವು ಅಲರ್ಟ್ ಆಗಿ ಇರಬೇಕು ಅಂತ.

ಆದ್ರೆ ಚೈತ್ರಾ ಕುಂದಾಪುರ ಸ್ವರ್ಗಕ್ಕೆ ಪ್ರವೇಶಿಸಿದ ತಕ್ಷಣವೇ ಸ್ವರ್ಗದ ಚಿತ್ರಣ ಅಕ್ಷರಶಃ ನರಕವಾಗಿ ಬಿಡುತ್ತದೆ. ಚೈತ್ರಾ ಸ್ವರ್ಗದಲ್ಲಿ ಜೋರಾಗಿ ಮಾತನಾಡ್ತಾರೆ… ಇದನ್ನ ಸ್ವರ್ಗವಾಸಿಗಳು ಪ್ರಶ್ನಿಸಿದಾಗ, ರೂಲ್ಸ್ ಬುಕ್ ನಲ್ಲಿ ಮಾತನಾಡ ಬಾರದು ಅಂತ ಇಲ್ಲ ಅಂತಾರೆ.  ಸ್ವರ್ಗವಾಸಿಗಳ ಹಣ್ಣನ್ನು ಕಸಿದು ತಿಂತಾರೆ, ಈಗ ಸ್ವರ್ಗದ ನಿವಾಸಿಗಳಲ್ಲೇ ಗಲಾಟೆ ಆರಂಭವಾಗ್ತವೆ. ಹಣ್ಣು ಮುಟ್ಟಿದ್ದಕ್ಕೆ ಯಮುನಾ ಅವರು ಚೈತ್ರಾ ಅವರಿಗೆ ಕ್ಲಾಸ್‌ ತೆಗೆದುಕೊಂಡರೂ, ಬಿಗ್ ಬಾಸ್’ ಪನಿಶ್‌ಮೆಂಟ್ ಕೊಡ್ತಾರೆ. ನಿಮಗೆ ರೈಟ್ಸ್ ಇಲ್ಲ ಎಂದು ಚೈತ್ರಾ ಕುಂದಾಪುರ ಗುಡುಗುತ್ತಾರೆ.

ಗೋಲ್ಡ್‌ ಸುರೇಶ್‌ ಅವರು ಎಲ್ಲ ಕೆಲಸ ಮಾಡ್ತಾರೆ. ಇದರಿಂದಾಗಿ ಸ್ವರ್ಗದವರಿಂದ ಮೆಚ್ಚುಗೆ ಸಿಗುತ್ತೆ. ಆದರೆ ಚೈತ್ರಾ ಬಗ್ಗೆ ಇಡೀ ಸ್ವರ್ಗದ ಸ್ಪರ್ಧಿಗಳು ಅಸಮಾಧಾನ ಹೊರ ಹಾಕುತ್ತಾರೆ.

ಸ್ವರ್ಗ ನಿವಾಸಿಗಳಿಗೆ ಒಂದೇ ದಿನದಲ್ಲಿ ಬೆವರಿಳಿಸಿದ ಚೈತ್ರಾ ಕುಂದಾಪುರ ಅವರ ಆಟಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಮೈಂಡ್ ಗೇಮ್ ಸೂಪರ್ ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ