ಉದ್ಯಮಿ ಗೋವಿಂದ ಬಾಬುಗೆ ಶಾಕ್ ನೀಡಿದ ಚೈತ್ರಾ ಕುಂದಾಪುರ: ಇಡಿಗೆ ಪತ್ರ! - Mahanayaka

ಉದ್ಯಮಿ ಗೋವಿಂದ ಬಾಬುಗೆ ಶಾಕ್ ನೀಡಿದ ಚೈತ್ರಾ ಕುಂದಾಪುರ: ಇಡಿಗೆ ಪತ್ರ!

chaithra kundapura govinda babu poojari
18/09/2023


Provided by

ಉಡುಪಿ: ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಿರುದ್ಧ ದೂರು ದಾಖಲಿಸಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಇದೀಗ ಕಾನೂನಿನ ಕಂಟಕ ಶುರುವಾಗಿದೆ.

ಟಿಕೆಟ್ ಗಾಗಿ ಉದ್ಯಮಿ ಗೋವಿಂದ ಬಾಬು 5 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯ(ED) ಗೆ ಪತ್ರ ಬರೆದಿದ್ದಾರೆ.

5 ಕೋಟಿ ರೂಪಾಯಿಯನ್ನು ವಾಪಸ್ ಕೊಡುವಂತೆ ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ ಗೆ ಗೋವಿಂದ ಬಾಬು ಕೇಳಿದ ಬೆನ್ನಲ್ಲೇ ಇಡಿಗೆ ದೂರು ನೀಡಲಾಗಿದ್ದು, 5 ಕೋಟಿ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಇಡಿಗೆ ಆಗ್ರಹಿಸಲಾಗಿದೆ.

ಚುನಾವಣಾ ಟಿಕೆಟ್ ಗಾಗಿ ಮಂಜುನಾಥ್ ಗೆ 1 ಕೋಟಿ ರೂ, ಅಭಿನವ ಹಾಲಶ್ರೀ ಸ್ವಾಮೀಜಿಗೆ 1.5 ಕೋಟಿ ರೂ., ವಿಶ್ವನಾಥ್ ಜಿಗೆ 3 ಕೋಟಿ ರೂ. ಹಣ ನೀಡಿರೋದಾಗಿ ಗೋವಿಂದ ಬಾಬು ತನಗೆ ತಿಳಿಸಿದ್ದಾರೆ ಎಂದು ಚೈತ್ರಾ ಕುಂದಾಪುರ ಪತ್ರದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿ ಎಂದು ಗೋವಿಂದ ಬಾಬುಗೆ ಹೇಳಿದ್ದೆ ಎಂದು ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ