ಬಿಜೆಪಿ ಪರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ನಿಂದ ದೂರು - Mahanayaka

ಬಿಜೆಪಿ ಪರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ನಿಂದ ದೂರು

chakrawarthy sulibele
20/06/2021


Provided by

ಬೆಂಗಳೂರು: ಲೇಖಕ, ಬಿಜೆಪಿ ಪರ ವಾಗ್ಮಿ ಮಿಥುನ್ ಚಕ್ರವರ್ತಿ(ಚಕ್ರವರ್ತಿ ಸೂಲಿಬೆಲೆ) ವಿರುದ್ಧ  ಕಾಂಗ್ರೆಸ್ ಮುಖಂಡ ತೇಜಸ್ ಕುಮಾರ್ ದೂರು ನೀಡಿದ್ದು, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ತೇಜಸ್ ಕುಮಾರ್ ಅವರು, ನೀಡಿರುವ ದೂರಿನ ಪ್ರಕಾರ, ಜೂನ್ 7ರಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದ ಚಕ್ರವರ್ತಿ ಸೂಲಿಬೆಲೆ,  ಜನರಿಗೆ  ಆಕ್ಸಿಜನ್ ಸಿಗದಂತೆ ಕಾಂಗ್ರೆಸ್ ಅಕ್ರಮ ದಾಸ್ತಾನು ಮಾಡಿತ್ತು, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡಿ ಜನ ಸಾಯುವಂತೆ ಮಾಡಿತ್ತು. ಅಮಾಯಕರ ಸಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿ ಭಾರತದ ಮಾನ ಹರಾಜು ಹಾಕಿತ್ತು ಎಂದು ಹೇಳಿದ್ದರು ಎಂದು ಹೇಳಲಾಗಿದೆ.

ಈ ರೀತಿಯ ಲೇಖನ ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ತೇಜಸ್ ಕುಮಾರ್ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ