ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದ ಮಗುವಿನ ದಾರುಣ ಸಾವು - Mahanayaka
3:11 PM Wednesday 15 - October 2025

ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದ ಮಗುವಿನ ದಾರುಣ ಸಾವು

udupi
29/08/2022

ಉಡುಪಿ: ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆ ಯಡ್ತರೆ ಗ್ರಾಮದ ಉದುರು ಎಂಬಲ್ಲಿ ನಡೆದಿದೆ.


Provided by

ಮೃತ ಮಗುವನ್ನು ಉಪ್ಪುಂದ ಗ್ರಾಮದ ಶೇಖರ ಖಾರ್ವಿ ಹಾಗೂ ಶೈಲಾ ದಂಪತಿಯ ನಾಲ್ಕು ತಿಂಗಳ ಹೆಣ್ಣುಮಗು ಸಾನ್ವಿತಾ ಎಂದು ಗುರುತಿಸಲಾಗಿದೆ.

ಶೈಲಾ ಹೆರಿಗೆಯಾಗಿ ತಾಯಿ ಮನೆಯಾದ ಉದುರುವಿನಲ್ಲಿ ವಾಸವಾಗಿದ್ದು, ಆ.27ರಂದು ರಾತ್ರಿ ಮಗು ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ರಾತ್ರಿ 12:15ಕ್ಕೆ ಕರೆದುಕೊಂಡು ಹೋದಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ದಾರಿಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ