ಚಾಮರಾಜನಗರ: 450 ವರ್ಷಗಳ ಪುರಾತನ ದರ್ಗಾದಲ್ಲಿ ಸಂಭ್ರಮದ ಗಂಧೋತ್ಸವ

14/09/2023
ಚಾಮರಾಜನಗರ: 450 ವರ್ಷಗಳ ಪುರಾತನವಾದ ಸೂಫಿ ಸಂತರ ದರ್ಗಾದಲ್ಲಿ ಇಂದು ಮುಸ್ಲಿಂರು ಸಂಭ್ರಮದಿಂದ ಗಂಧದ ಉರುಸ್ ನಡೆಸಿದರು.
ಚಾಮರಾಜನಗರದ ರಾಮಸಮುದ್ರದ ಸಮೀಪದ ಕುನ್ನೀರುಕಟ್ಟೆತಯಲ್ಲಿರುವ ಹಜರತ್ ದಿಲ್ಬರ್ ಷಾ ಖಾದ್ರಿ ಅವರ ದರ್ಗಾದಲ್ಲಿ ಗಂಧದ ಉರುಸ್ ನಡೆಸಲಾಯಿತು. ತಮಿಳುನಾಡು, ಬೆಂಗಳೂರು ಸೇರಿದಂತೆ ದೂರದ ಊರುಗಳಿಂದಲೂ ಇಲ್ಲಿ ಭಜ್ತರು ಬಂದು ಹರಕೆ ತೀರಿಸಿದರು.
ಸುಮಾರು 450 ವರ್ಷಗಳ ಇತಿಹಾಸವಿರುವ ಈ ದರ್ಗಾದಲ್ಲಿ ಏನೆ ಹರಕೆ ಕಟ್ಟಿಕೊಂಡರು ಈಡೇರುವ ನಂಬಿಕೆ ಹಿನ್ನೆಲೆ ಸಾವಿರಾರು ಮಂದಿ ಭಕ್ತರು ಆಗಾಗ್ಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ.