ಸೋಮಣ್ಣಗೆ ಡಬಲ್ ಹೊಣೆ:  ಮೊದಲ ಬಾರಿಗೆ ಕಮಲದ ಚಿಹ್ನೆಯಿಂದ ಸ್ಪರ್ಧಿಸಲಿರುವ ಎನ್.ಮಹೇಶ್ - Mahanayaka
10:42 PM Wednesday 20 - August 2025

ಸೋಮಣ್ಣಗೆ ಡಬಲ್ ಹೊಣೆ:  ಮೊದಲ ಬಾರಿಗೆ ಕಮಲದ ಚಿಹ್ನೆಯಿಂದ ಸ್ಪರ್ಧಿಸಲಿರುವ ಎನ್.ಮಹೇಶ್

chamarajanagra bjp
12/04/2023


Provided by

ಚಾಮರಾಜನಗರ: ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದ್ದು ಚಾಮರಾಜನಗರ ಮತ್ತು ವರುಣದಲ್ಲಿ ವಿ.ಸೋಮಣ್ಣ ಬಿಜೆಪಿ ಕಲಿಯಾಗಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಕಾಂಗ್ರೆಸ್  ಭದ್ರ ನೆಲೆಯೂರಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕೆಂದು ಪಣ ತೊಟ್ಟಿರುವ ಕೇಸರಿಪಡೆಗೆ ವಿ.ಸೋಮಣ್ಣ ಸಾರಥಿಯಾಗಿದ್ದು ಎರಡು ಟಿಕೆಟ್ ಗಳನ್ನು ಕೊಡುವ ಮೂಲಕ ವಸತಿ ಸಚಿವಗೆ ಸೋಮಣ್ಣಗೇ ಡಬಲ್ ಹೊಣೆ ಕೊಟ್ಟಿದೆ.

ಕೇಳಿದ್ದು 2 ಬಂದಿದ್ದೂ 2 ಆದರೂ….!

ಮಗ ಹಾಗೂ ತಮಗೆ ಸೇರಿ ಎರಡು ಟಿಕೆಟ್ ಗಳನ್ನು ವಿ. ಸೋಮಣ್ಣ ಕೇಳಿದ್ದರು. ಆದರೆ, ಹೈ ಕಮಾಂಡ್ ಏನೋ‌ 2 ಟಿಕೆಟ್ ಕೊಟ್ಟಿದೇ ಆದರೆ ಸೋಮಣ್ಣ ಅವರೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯ ಮತ್ತು ತಮ್ಮ ವರ್ಚಸ್ಸನ್ನು ತೋರಬೇಕಾದ ಕಾಲ ಎದುರಾಗಿದೆ.

ಲಿಂಗಾಯತ ಸಮುದಾಯದ ನಾಯಕನಾಗಿರುವ ವಿ.ಸೋಮಣ್ಣ ಕಾಂಗ್ರೆಸ್ ನ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಮಣಿಸುವ ಜೊತೆಗೆ  ಕಳೆದ ಮೂರು ಸಾಲಿನಿಂದ ಕೈ ವಶದಲ್ಲಿರುವ ಚಾಮರಾಜನಗರದಲ್ಲಿ ಕಮಲ‌ ಅರಳಿಸುವ ಡಬಲ್ ಟಾರ್ಗೆಟ್ ಕೊಟ್ಟಿದೆ ಮೋದಿ ಪಡೆ.

ಸಾಂಪ್ರದಾಯಿಕ ಎದುರಾಳಿಗೆ ಟಿಕೆಟ್:

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಆರಂಭದಿಂದಕೂ ಎರಡು ಕುಟುಂಬಗಳ‌ ನಡುವೆಯೇ ಫೈಟ್ ನಡೆಯಲಿದ್ದು, ಇದು ಈ ಬಾರಿಯೂ ಮುಂದುವರೆಯಲಿದೆ. ಕಾಂಗ್ರೆಸ್ ನಿಂದ ಆರ್.ನರೇಂದ್ರ ಕಣ್ಣಕ್ಕಿಳಿಯಲಿದ್ದು,  ಬಿಜೆಪಿಯಿಂದ ಸಾಂಪ್ರದಾಯಿಕ ಎದುರಾಳಿ ಡಾ.ಪ್ರೀತಂ ನಾಗಪ್ಪ ಕಣಕ್ಕಿಳಿಸಲು ಬಿಜೆಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಇನ್ನು, ನಿರೀಕ್ಷೆಯಂತೆ ಕೊಳ್ಳೇಗಾಲದಲ್ಲಿ ಹಾಲಿ ಶಾಸಕ ಎನ್. ಮಹೇಶ್ ಅವರಿಗೆ ಟಿಕೆಟ್ ಲಭಿಸಿದೆ. ಕಳೆದ ಬಾರಿ ಬಿಎಸ್ ಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ  ಎನ್.ಮಹೇಶ್ ಅವರು ಈ ಬಾರಿ ಮೊದಲ ಬಾರಿಗೆ ಬಿಜೆಪಿಯ ಕಮಲದ ಚಿಹ್ನೆಯಿಂದ ಸ್ಪರ್ಧಿಸಿದ್ದಾರೆ. ಪಕ್ಷದ ವರ್ಚಸ್ಸೋ ಅಥವಾ ಎನ್.ಮಹೇಶ್ ಅವರ ವರ್ಚಸ್ಸೋ… ಈ ಬಾರಿ ಗೆಲುವು ಸಾಧಿಸುವುದು ಪ್ರತಿಷ್ಠೆಯ ವಿಚಾರ ಕೂಡ ಆಗಿದೆ. ಭಾಷಣ ರಾಜಕೀಯದಿಂದ ದೂರ ಉಳಿದಿರುವ ಎನ್.ಮಹೇಶ್ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮೂಲಕ ಹೊಸ ಹಾದಿಯ ಪ್ರಚಾರಕ್ಕೆ ಇಳಿದಿದ್ದಾರೆ.

ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ‌ ನಿರಂಜನಕುಮಾರ್ ಕಮಲ ಕಲಿಗಳಾಗಿ ರಣರಂಗಕ್ಕೆ ಇಳಿಯಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ