ಕಾರು ಈಚರ್ ನಡುವೆ ಅಪಘಾತ: ನಾಲ್ವರು ಅಯ್ಯಪ್ಪ ಮಾಲಾಧಾರಿಗಳ ಕೈ–ಕಾಲು ಮುರಿತ

ಚಾಮರಾಜನಗರ: ಈಚರ್ ವಾಹನ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಸಮೀಪ ನಡೆದಿದೆ.
ವಿಜಯಪುರ ಜಿಲ್ಲೆಯ ಜೇವರ್ಗಿ ಗ್ರಾಮದ ದೊರೆಯಪ್ಪ, ಶಶಿ ಬಡಿಗೇರ, ಪ್ರಭು ಬಡಿಗೇರ ಹಾಗು ಬೈಕ್ ನಲ್ಲಿ ಬರುತ್ತಿದ್ದ ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದ ಬಸಪ್ಪ ಅವರ ತಲೆ, ಕೈ, ಕಾಲಿಗೆ ತೀವ್ರ ತರ ಪೆಟ್ಟು ಬಿದ್ದಿವೆ. ಕಾರಿನಲ್ಲಿದ್ದ ವಿಜಯಪುರ ಮೂಲದ ಆರು ಮಂದಿ ಕೇರಳದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ಆರು ಮಂದಿಯಲ್ಲಿ ಮೂರು ಮಂದಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರು ಹಾಗು ಈಚರ್ ಗೂಡ್ಸ್ ಟೆಂಪೋ ಎದುರು ಬದುರು ರಾಘವಾಪುರ ಗ್ರಾಮದ ಗ್ರಾಪಂ ಕಚೇರಿ ಮುಂದೆ ಬಂದಾಗ ಅಪಘಾತ ನಡೆದಿದ್ದು, ಬೈಕ್ ಸವಾರ ಬಸಪ್ಪ ಮಧ್ಯೆ ಸಿಲುಕಿದ್ದಾರೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೇಗದಿಂದ ಬರುತ್ತಿದ್ದ ಕಾರು ಹಾಗೂ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋದ ಮುಂದಿನ ಚಕ್ರಗಳು ಕಿತ್ತು ನೂರು ಮೀಟರ್ ನಷ್ಟು ದೂರು ಕಳಚಿ ಬಿದ್ದಿದೆ. ಜೊತೆಗೆ ಈಚರ್ ವಾಹನ ರಸ್ತೆಯಲ್ಲೆ ಪಲ್ಟಿಯಾಗಿದ್ದು, ಕಾರು ಕೂಡ ಸಂಪೂರ್ಣವಾಗಿ ಜಖಂಗೊಂಡಿದೆ.
ಘಟನೆ ಸಂಬಂಧ ವಾಹನಗಳನ್ನು ವಶಕ್ಕೆ ಪಡೆದಿರುವ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw