1ರಿಂದ 9ನೇ ತರಗತಿ ಮಕ್ಕಳಿಗೆ ನಾಳೆಯಿಂದ ಚಂದನ ಟಿವಿಯಲ್ಲಿ ಪಾಠ! - Mahanayaka
11:13 AM Saturday 23 - August 2025

1ರಿಂದ 9ನೇ ತರಗತಿ ಮಕ್ಕಳಿಗೆ ನಾಳೆಯಿಂದ ಚಂದನ ಟಿವಿಯಲ್ಲಿ ಪಾಠ!

chandana
12/01/2022


Provided by

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮತ್ತೆ ಶೈಕ್ಷಣಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ. ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣದ ಬಗ್ಗೆ ಆತಂಕ ಮೂಡಿರುವುದರ ನಡುವೆಯೇ ಇದೀಗ ಕೆಲವು ಜಿಲ್ಲೆಗಳಲ್ಲಿ  1ರಿಂದ 9ನೇ ತರಗತಿ ವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳು ಬಂದ್ ಆಗಿವೆ.

ಇನ್ನೂ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲಿಕೆಗಾಗಿ ಸರ್ಕಾರ ಸೋಮವಾರದಿಂದ ಶುಕ್ರವಾರದವರೆಗೆ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠ ಮಾಡಲಿದೆ ಎನ್ನಲಾಗುತ್ತಿದ್ದು, ಜನವರಿ 13ರಿಂದ  ಇದು ಆರಂಭವಾಗಲಿದೆ ಎಂದು ಹೇಳಲಾಗಿದೆ.

ಈ ಕುರಿತಾದ ವೇಳಾಪಟ್ಟಿಯನ್ನು ನೀಡಲಾಗಿದ್ದು, ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ತಲುಪಿಸುವಂತೆ ಶಿಕ್ಷಕರುಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಕೊವಿಡ್ ಪ್ರಕರಣಗಳ ಏರಿಕೆ ಅಥವಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ತೀವ್ರವಾದ ಹೊಡೆತ ಬಿದ್ದಿದೆ. ಬಹಳಷ್ಟು ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿದೆ. ಭೌತಿಕ ತರಗತಿಯ ಬದಲು ಟಿವಿ ಪಾಠ ಸರಿಯಾದ ಕ್ರಮವಲ್ಲ. ಎಷ್ಟು ಮಕ್ಕಳು ಟಿವಿ ಪಾಠ ಕೇಳುತ್ತಾರೆ? ಎನ್ನುವ ಪ್ರಶ್ನೆ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

77ರ ವೃದ್ಧ ಸೇರಿದಂತೆ 8 ಮಂದಿಯಿಂದ ಬಾಲಕಿಯ ಮೇಲೆ ಅತ್ಯಾಚಾರ

ಶಿವರಾಜ್ ಕುಮಾರ್ ಪಾದಯಾತ್ರೆಗೆ ಹೋಗದಿರುವುದು ನನಗೆ ತುಂಬಾ ಸಂತೋಷವಾಗಿದೆ | ಸಚಿವ ಈಶ್ವರಪ್ಪ

ಗಾಯಕಿ ಲತಾ ಮಂಗೇಶ್ಕರ್  ಅನಾರೋಗ್ಯ:  ಐಸಿಯುನಲ್ಲಿ ಚಿಕಿತ್ಸೆ

ಮನುಷ್ಯನಿಗೆ ಹಂದಿಯ ಹೃದಯ ಅಳವಡಿಕೆ ಯಶಸ್ವಿ: ವಿಜ್ಞಾನದಲ್ಲಿ ಮತ್ತೊಂದು ಸಾಧನೆ

ಟೆಲಿಗ್ರಾಮ್  ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ

ಇತ್ತೀಚಿನ ಸುದ್ದಿ