ಚಂದ್ರಗಿರಿಯಲ್ಲಿ ಪತ್ತೆಯಾಯ್ತು 40 ಕೆ.ಜಿ. ತೂಕದ ಬೃಹತ್ ಆಮೆ - Mahanayaka

ಚಂದ್ರಗಿರಿಯಲ್ಲಿ ಪತ್ತೆಯಾಯ್ತು 40 ಕೆ.ಜಿ. ತೂಕದ ಬೃಹತ್ ಆಮೆ

Turtle
31/03/2022

ಸಿಹಿನೀರಿನ ಆವಾಸಸ್ಥಾನಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಜಾತಿಯ ದೈತ್ಯ ಹೆಣ್ಣು ಆಮೆ ಕಾಸರಗೋಡು ಚಂದ್ರಗಿರಿಯ ಪಯಸ್ವಿನಿಪುಳದಲ್ಲಿ ಮೃತ ಸ್ಥಿತಿಯಲ್ಲಿ  ಕಂಡುಬಂದಿದೆ.


Provided by

ಜೈಂಟ್ ಸಾಫ್ಟ್ ಶೆಲ್ಟರ್ ಎಂದು ಕರೆಯಲ್ಪಡುವ ಈ ಆಮೆ ಸುಮಾರು 40 ಕೆ.ಜಿ. ತೂಕವಿದ್ದು, 10 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಪರೂಪದ ವನ್ಯಜೀವಿ ಆಮೆ 1 ಮೀಟರ್ ಉದ್ದ ಮತ್ತು 62 ಸೆಂ.ಮೀ ಅಗಲವಿದೆ.  ಬಾವಿಕ್ಕರದಲ್ಲಿ ರೆಗ್ಯುಲೇಟರ್‌ ಗೆ ಸಿಲುಕಿ ತಲೆಗೆ ಪೆಟ್ಟು ಬಿದ್ದು ಆಮೆ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.  ಪಶು ವೈದ್ಯಾಧಿಕಾರಿ ವಿಷ್ಣು ವೇಲಾಯುಧನ್ ಆಗಮಿಸಿ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದರು.

2010ರಲ್ಲಿ ಕೋಝಿಕ್ಕೋಡ್ ಕುಟ್ಯಾಡಿ ನದಿಯಲ್ಲಿ ಪತ್ತೆಯಾದ ನಂತರ ಈ ರೀತಿಯ ಆಮೆ ಪಯಸ್ವಿನಿ ಮತ್ತು ಚಂದ್ರಗಿರಿ ನದಿಗಳಲ್ಲಿ ಪತ್ತೆಯಾಗಿದ್ದವು.  ಇದಕ್ಕೂ ಮುಂಚೆ ವನ್ಯಜೀವಿ ಸಂಶೋಧಕರು ಈ ಆಮೆಗಳ ಐದು ಮೊಟ್ಟೆಗಳನ್ನು ಥಲಂಕಾರದ ನದಿ ದಡದಲ್ಲಿ ಕಂಡುಹಿಡಿದು ಅರಣ್ಯ ಇಲಾಖೆಯ ನೆರವಿನಿಂದ ಕೃತಕವಾಗಿ ಮೊಟ್ಟೆಯೊಡೆದು ಐದು ಆಮೆ ಮರಿಗಳನ್ನು ನದಿಗೆ ಬಿಟ್ಟಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಂದೇ ದೇಹ, ಎರಡು ತಲೆ ಹೊಂದಿದ ಅಪರೂಪದ ಸಯಾಮಿ ಶಿಶು ಜನನ

ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಗಾಂಜಾ ಸಹಿತ ಆರೋಪಿಯ ಬಂಧನ

ವೇದಿಕೆಯಲ್ಲಿಯೇ ಕೊಳ್ಳೇಗಾಲದ ಮುಂದಿನ ಅಭ್ಯರ್ಥಿಯನ್ನು ಘೋಷಿಸಿದ ಯಡಿಯೂರಪ್ಪ

ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ: ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಪೊಲೀಸ್‌ ವಶಕ್ಕೆ

ಮತ್ತೆ ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ 80 ಪೈಸೆ ಏರಿಕೆ

ಇತ್ತೀಚಿನ ಸುದ್ದಿ