ಟೈಮ್ಸ್ ನ ವರ್ಷದ 100 ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ - Mahanayaka

ಟೈಮ್ಸ್ ನ ವರ್ಷದ 100 ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್

18/02/2021


Provided by

ನ್ಯೂಯಾರ್ಕ್:  ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್,  ಟ್ವಿಟರ್ ನ ಉನ್ನತ ವಕೀಲ ವಿಜಯ ಗದ್ದೆ ಇಂಗ್ಲೆಂಡ್‍ನ ವಿತ್ತ ಸಚಿವ ರಿಷಿ ಸುನಕ್  ಭಾರತ ಮೂಲದ ವ್ಯಕ್ತಿಗಳು ಟೈಮ್ಸ್ ನಿಯತಕಾಲಿಕೆಯ ವರ್ಷದ 100 ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿರುವ ಪ್ರತಿಯೊಬ್ಬರು ಕೂಡ ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ ಹೆಚ್ಚಿನವರು ಈಗಾಗಲೇ ಇತಿಹಾಸ ನಿರ್ಮಿಸಿದ್ದಾರೆ ಎಂದು  ಟೈಮ್ಸ್ ನ ಸಂಪಾದಕೀಯದಲ್ಲಿ ನಿರ್ದೇಶಕ ಡ್ಯಾನ್ ಮ್ಯಾಕ್ಸಾಯ್ ಹೇಳಿದ್ದಾರೆ.

ಭೀಮ್ ಆರ್ಮಿ ನಾಯಕನಾಗಿರುವ 36ರ ವಯಸ್ಸಿನ  ಚಂದ್ರಶೇಖರ್ ಆಝಾದ್ ದಲಿತರು ಬಡತನದಿಂದ ಹೊರಬಂದು ಶಿಕ್ಷಣ ಪಡೆಯುವಂತಾಗಲು ಶಾಲೆಗಳನ್ನು ನಡೆಸುತ್ತಿದ್ದಾರೆ ಮತ್ತು ಅನೇಕ ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಹತ್ರಸ್ ನಲ್ಲಿ ದಲಿತ ಯುವತಿ ಸಾಮೂಹಿಕ ಅತ್ಯಾಚಾರ, ಹತ್ಯೆಯ ಸಂತ್ರಸ್ತ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟದ ನೇತೃತ್ವವಹಿಸಿದ್ದು, ಇದೇ ಚಂದ್ರಶೇಖರ್ ಆಝಾದ್ ನೇತೃತ್ವ ವಹಿಸಿದ್ದರು.

 

ಇತ್ತೀಚಿನ ಸುದ್ದಿ