ಚಪ್ಪಲಿ ಏಟು ತಿನ್ನಬಹುದು ಆದರೆ, ದುಡ್ಡೇಟು ತಿನ್ನೋಕೆ ಆಗಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಚಪ್ಪಲಿ ಏಟು ತಿನ್ನಬಹುದು. ಆದರೆ ದುಡ್ಡೇಟು ತಿನ್ನಲಿಕ್ಕೆ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ಬಾರಿ ಚಪ್ಪಲಿಯಲ್ಲಿ ಪಟ ಪಟ ಪಟ ಅಂತ ಹೊಡೆದರೂ ತಿನ್ನಬಹುದು. ಆದರೆ ದುಡ್ಡಿನ ಏಟು ತಿನ್ನಲು ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಆದಾಯ ಪಾತಾಳಕ್ಕೆ ಹೋಗಿದೆ. ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹೀಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ. ಗ್ಯಾಸ್ ಸಿಲಿಂಡರ್, ಬೈಕ್ ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಜನರ ನೋವನ್ನು ಬಿಜೆಪಿ ವಿರುದ್ಧ ಮತ ಹಾಕಿ, ಬಿಜೆಪಿ ಸರ್ಕಾರ ಕಿತ್ತೆಸೆಯುವ ಮೂಲಕ ಕಳೆಯಬೇಕು ಎಂದು ಕಿಡಿಕಾರಿದರು.
ಬೆಲೆ ಏರಿಕೆ ಮುಕ್ತ ಅಭಿಯಾನಕ್ಕೆ ಎಐಸಿಸಿ ಚಾಲನೆ ನೀಡಿದೆ. ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ತಳ್ಳುಗಾಡಿ ಮೇಲೆ ಇಟ್ಟ ಬೈಕ್‌ಗೆ ಹಾರ ಹಾಕಿ ಡಿಕೆಶಿ ಆರತಿ ಎತ್ತಿದರು. ನಂತರ ತಲೆಮೇಲೆ ಸಿಲೆಂಡರ್ ಹೊತ್ತು ವಿನೂತನ ಪ್ರತಿಭಟನೆ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ: ಎಚ್.ವಿಶ್ವನಾಥ್
ರಂಜಾನ್ ವೇಳೆ ಹಿಂದೂಗಳ ವ್ಯಾಪಾರಕ್ಕೆ ಧಕ್ಕೆ ತರಬೇಡಿ, ಅವರೊಂದಿಗೆ ಸಹಕರಿಸಿ: ಮುಸ್ಲಿಮ್ ಮುಖಂಡರಿಂದ ಮನವಿ
ಮೊಸಳೆಗಳು, ಹಲ್ಲಿಗಳು, ಹಾವುಗಳು: ಆತನ ಜಾಕೆಟ್, ಕಾರಿನಲ್ಲಿತ್ತು 1,700 ಜೀವಿಗಳು
ಚಂದ್ರಗಿರಿಯಲ್ಲಿ ಪತ್ತೆಯಾಯ್ತು 40 ಕೆ.ಜಿ. ತೂಕದ ಬೃಹತ್ ಆಮೆ