ಚಾರ್ಮಾಡಿ ಘಾಟ್‌: ಮೂತ್ರ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಯುವಕನ ಸ್ಥಿತಿ ಗಂಭೀರ - Mahanayaka
7:49 PM Wednesday 20 - August 2025

ಚಾರ್ಮಾಡಿ ಘಾಟ್‌: ಮೂತ್ರ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಯುವಕನ ಸ್ಥಿತಿ ಗಂಭೀರ

12/08/2025


Provided by

ಕೊಟ್ಟಿಗೆಹಾರ:  ಚಾರ್ಮಾಡಿ ಪ್ರಕೃತಿ ಸೌಂದರ್ಯದಿಂದ ಹೆಸರುವಾಸಿಯಾದ ಚಾರ್ಮಾಡಿ ಘಾಟ್‌ ನಲ್ಲಿ ಸೋಮವಾರ ಮಧ್ಯಾಹ್ನ ಅಪಘಾತ ಸಂಭವಿಸಿ, 21 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೂತ್ರವಿಸರ್ಜನೆಗಾಗಿ ಪ್ರಪಾತದ ಅಂಚಿನತ್ತ ಹೋದಾಗ, ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು,  ಚಕ್ ಮಕ್ಕಿ ಗ್ರಾಮದ ನಿವಾಸಿ ಮುಸಮ್ಮಿಲ್ (21) ಗಾಯಗೊಂಡಿದ್ದಾನೆ. ತಕ್ಷಣ ಸ್ಥಳೀಯರು ಮತ್ತು ಸ್ನೇಹಿತರು ಸಹಾಯಕ್ಕೆ ಧಾವಿಸಿ, ಅವನನ್ನು ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರು ಆಸ್ಪತ್ರೆಗೆ ರವಾನಿಸಿದರು.

ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗವಾಗಿದ್ದು, ಪ್ರವಾಸಿಗರು ಆಗಾಗ ಭೇಟಿ ನೀಡುವ ಸ್ಥಳವಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತು ಪ್ರಪಾತದ ಅಂಚು ಜಾರುವಿಕೆ ಅಪಾಯವಾಗಿದೆ.  ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ