ಚೆಂಡು ಎಂದು ಭಾವಿಸಿ ಬಾಂಬ್ ಹೆಕ್ಕಿದ ಬಾಲಕರು: ಬಾಂಬ್ ಸ್ಫೋಟಿಸಿ ಬಾಲಕ ಮೃತ್ಯು, ಇಬ್ಬರ ಸ್ಥಿತಿ ಗಂಭೀರ - Mahanayaka
11:11 AM Saturday 23 - August 2025

ಚೆಂಡು ಎಂದು ಭಾವಿಸಿ ಬಾಂಬ್ ಹೆಕ್ಕಿದ ಬಾಲಕರು: ಬಾಂಬ್ ಸ್ಫೋಟಿಸಿ ಬಾಲಕ ಮೃತ್ಯು, ಇಬ್ಬರ ಸ್ಥಿತಿ ಗಂಭೀರ

02/03/2021


Provided by

ಪಾಟ್ನ: ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕರು ಬಾಂಬ್ ನ್ನು ಚೆಂಡು ಎಂದು ಹೆಕ್ಕಿದ್ದು , ಈ ವೇಳೆ ಬಾಂಬ್ ಸ್ಫೋಟಿಸಿ ಓರ್ವ ಬಾಲಕ ದಾರುಣವಾಗಿ ಮೃತಪಟ್ಟು ಇಬ್ಬರು ಬಾಲಕರು ಗಾಯಗೊಂಡ ಘಟನೆ ನಡೆದಿದೆ.

ಬಿಹಾರದ ಖಗಾರಿಯಾ ಜಿಲ್ಲೆಯ ಶಾಲೆಯೊಂದರ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಗೋಗ್ರಿ ಠಾಣಾ ವ್ಯಾಪ್ತಿಗೆ ಬರುವ ಭಗವಾನ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಸಂಜೆ  ಮೂವರು ಬಾಲಕರು ಆಟವಾಡುತ್ತಿದ್ದರು.

ಆಟವಾಡುತ್ತಿದ್ದ ವೇಳೆ ಮೈದಾನದಲ್ಲಿ  ಚೆಂಡಿನಂತಹ ವಸ್ತುವೊಂದನ್ನು ಕಂಡು ಬಾಲಕರು ಅಚ್ಚರಿಗೊಂಡಿದ್ದಾರೆ. ಬಳಿಕ ಕೋಲಿನಿಂದ ಒಬ್ಬ ಬಾಲಕ ಬಾಂಬ್ ಗೆ ಹೊಡೆದಿದ್ದಾನೆ. ಬಳಿಕ ಇನ್ನೊಬ್ಬ ಬಾಲಕ ಬಾಂಬ್ ನ್ನುಹೆಕ್ಕಿದ್ದು,  ಈ ವೇಳೆ ಬಾಂಬ್ ಸ್ಫೋಟಗೊಂಡು ಬಾಲಕರು ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕರ ಪೈಕಿ 9 ವರ್ಷ ವಯಸ್ಸಿನ ಮಹಮ್ಮದ್ ಕುರ್ಬಾನ್  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಖಗಾರಿಯಾ ಡಿವೈಎಸ್ ಪಿ ಮನೋಜ್ ಕುಮಾರ್  ಹೇಳಿದ್ದಾರೆ.

ಬಾಂಬ್ ದಾಳಿಗೆ ಸಂಚು ಹೂಡಿ ಕೆಲವರು ಬಾಂಬ್ ನ್ನು ಪೊದೆಯಲ್ಲಿ ಬಚ್ಚಿಟ್ಟಿರುವ ಸಾಧ್ಯತೆ ಇದೆ ಎಂದು ಮನೋಜ್ ಕುಮಾರ್   ಹೇಳಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

whatsapp

ಇತ್ತೀಚಿನ ಸುದ್ದಿ