ಛತ್ತೀಸ್ ಗಢದಲ್ಲಿ 12 ನಕ್ಸಲರ ಹತ್ಯೆ: ನಕ್ಸಲರು ಮುಖ್ಯವಾಹಿನಿಗೆ ಬರುವಂತೆ ಡಿಸಿಎಂ ವಿಜಯ್ ಶರ್ಮಾ ಮನವಿ - Mahanayaka

ಛತ್ತೀಸ್ ಗಢದಲ್ಲಿ 12 ನಕ್ಸಲರ ಹತ್ಯೆ: ನಕ್ಸಲರು ಮುಖ್ಯವಾಹಿನಿಗೆ ಬರುವಂತೆ ಡಿಸಿಎಂ ವಿಜಯ್ ಶರ್ಮಾ ಮನವಿ

11/05/2024


Provided by

ನಕ್ಸಲರು ಒಗ್ಗೂಡಿ ಆಡಳಿತದೊಂದಿಗೆ ಮಾತುಕತೆ ನಡೆಸಿ ಉತ್ತರಗಳನ್ನು ಕಂಡುಕೊಳ್ಳಬೇಕೆಂದು ಛತ್ತೀಸ್ ಗಢದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಒತ್ತಾಯಿಸಿದ್ದಾರೆ. ಬಿಜಾಪುರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹನ್ನೆರಡು ನಕ್ಸಲರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ ಅವರು ಈ ರೀತಿ ಮನವಿ ಮಾಡಿದ್ದಾರೆ.

ಮುಖ್ಯವಾಹಿನಿಗೆ ಸೇರಲು ಮತ್ತು ನಮ್ಮ ಸರ್ಕಾರದೊಂದಿಗೆ ಚರ್ಚಿಸಲು ನಾನು ಅವರಿಗೆ (ನಕ್ಸಲರಿಗೆ) ಮನವಿ ಮಾಡುತ್ತೇನೆ, ಅವ್ರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸಿದ್ಧವಾಗಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ಭವಿಷ್ಯದಲ್ಲಿ ಘೋಷಿಸಲಾಗುವುದು ಎಂದು ಶರ್ಮಾ ಎಎನ್ಐಗೆ ತಿಳಿಸಿದ್ದಾರೆ. ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅಭಿವೃದ್ಧಿ ಪ್ರತಿ ಹಳ್ಳಿಗೂ ತಲುಪಬೇಕು. ಬಸ್ತಾರ್ ಜನರನ್ನು ಏಕೆ ಒತ್ತೆಯಾಳುಗಳನ್ನಾಗಿ ಇಡಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

ಭದ್ರತಾ ಪಡೆಗಳ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಅವರು, “ಬಿಜಾಪುರ ಮತ್ತು ದಾಂತೇವಾಡದ ಡಿಆರ್ ಜಿ, ಎಸ್ ಟಿಎಫ್ ಮತ್ತು ಕೋಬ್ರಾ ಬೆಟಾಲಿಯನ್‌ಗಳ ಸುಮಾರು ಒಂದು ಸಾವಿರ ಸೈನಿಕರು ಜಂಟಿ ಕಾರ್ಯಾಚರಣೆಗೆ ಹೊರಟಿದ್ದರು. ಅದೃಷ್ಟವಶಾತ್, ಕಾರ್ಯಾಚರಣೆಯಲ್ಲಿ, ನಮ್ಮ ಯಾವುದೇ ಸೈನಿಕರಿಗೆ ಗಾಯಗಳಾಗಿಲ್ಲ. ಏತನ್ಮಧ್ಯೆ, ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಕಾರ್ಯಾಚರಣೆಯ ನಂತರ ಭದ್ರತಾ ಪಡೆಗಳನ್ನು ಅಭಿನಂದಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ