ಮತಾಂತರ ಆರೋಪ: ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿಯರಿಗೆ ಜಾಮೀನು ಮಂಜೂರು ಮಾಡಿದ ಛತ್ತೀಸ್ ಗಢ ಕೋರ್ಟ್

ಬಿಲಾಸ್ ಪುರ: ಬಲವಂತದ ಧಾರ್ಮಿಕ ಮತಾಂತರದ ಆರೋಪದ ಮೇಲೆ ಬಂಧಿತರಾಗಿದ್ದ ಕೇರಳದ ಇಬ್ಬರು ಕ್ಯಾಥೊಲಿಕ್ ಸನ್ಯಾಸಿನಿಗಳೂ ಸೇರಿದಂತೆ ಮೂವರಿಗೆ ಛತ್ತೀಸ್‌ಗಢದ ಬಿಲಾಸ್ ಪುರದ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎನ್‌ಐಎ ನ್ಯಾಯಾಲಯ) ಸಿರಾಜುದ್ದೀನ್ ಖುರೇಷಿ ಅವರು ಪ್ರೀತಿ ಮೆರ್ರಿ, ವಂದನಾ ಫ್ರಾನ್ಸಿಸ್ (ಇಬ್ಬರೂ ಕೇರಳದವರು), ಮತ್ತು ಸುಕಮನ್ ಮಾಂಡವಿ ಎಂಬುವರಿಗೆ ಜಾಮೀನು ನೀಡಿದ್ದಾರೆ. ತಮ್ಮ ಪಾಸ್ ಪೋರ್ಟ್‌ಗಳನ್ನು ಸರೆಂಡರ್ ಮಾಡಿ, ತಲಾ 50,000 ರೂ.ಗಳ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗಳನ್ನು ಒದಗಿಸುವಂತೆ ಷರತ್ತು ವಿಧಿಸಿದೆ.
ಸ್ಥಳೀಯ ಬಜರಂಗದಳದ ಕಾರ್ಯಕರ್ತರೊಬ್ಬರು ದೂರು ಸಲ್ಲಿಸಿದ ನಂತರ ಜುಲೈ 25 ರಂದು ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಮೂವರನ್ನು ಬಂಧಿಸಲಾಯಿತು. ಈ ಮೂವರು ಸೇರಿ ನಾರಾಯಣಪುರದ ಮೂರು ಹುಡುಗಿಯರನ್ನು ಕಳ್ಳಸಾಗಣೆ ಮಾಡಿ ಅವರನ್ನು ಬಲವಂತವಾಗಿ ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಅಮೃತೋ ದಾಸ್, ಶುಕ್ರವಾರ ವಿಚಾರಣೆಯ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ ಎಂದು ಹೇಳಿದರು. ವಿಚಾರಣೆಗಾಗಿ ಪ್ರಾಸಿಕ್ಯೂಷನ್ ಪೊಲೀಸ್ ಕಸ್ಟಡಿಯನ್ನು ಕೋರಿಲ್ಲ, ಸಂತ್ರಸ್ತರನ್ನು ಈಗಾಗಲೇ ಅವರ ಮನೆಗಳಿಗೆ ಕಳುಹಿಸಲಾಗಿದೆ ಎಂದು ಅವರು ದೃಢಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD