ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ಸಾವು - Mahanayaka
8:54 AM Wednesday 27 - August 2025

ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ಸಾವು

chikkamagaluru
27/08/2024


Provided by

ಚಿಕ್ಕಮಗಳೂರು:  ಮಲೆನಾಡಲ್ಲಿ ಕಾಡಾನೆ ಸಾವು ಪ್ರಕರಣ ಮುಂದುವರಿದಿದ್ದು, ಇಂದು ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ದಾರುಣವಾಗಿ ಸಾವನ್ನಪ್ಪಿದೆ.

ಭದ್ರಾ ಅಭಯಾರಣ್ಯದಿಂದ ಆಹಾರ ಅರಸಿ ಬಂದ ಕಾಡಾನೆ,  ತೋಟಕ್ಕೆ ಅಳವಡಿಸಿದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಕಾಡಾನೆ ಸಾವು ಪ್ರಕರಣಗಳು ನಡೆಯುತ್ತಿದ್ದರೂ, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿಲ್ಲ, ತೋಟಗಳಿಗೆ ವಿದ್ಯುತ್ ಬೇಲಿ ಹಾಕುವುದನ್ನು ತಡೆಯುವ ಕ್ರಮವಾಗಬೇಕು ಅನ್ನೋ ಮಾತುಗಳು ಇದೀಗ ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಕೊಳಗಾಮೆಯ ಆಶ್ರಯ ಎಸ್ಟೇಟ್ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ