ದತ್ತಜಯಂತಿ ವೇಳೆ ರಸ್ತೆಯಲ್ಲಿ ಮೊಳೆ ಹಾಕಿದ ಆರೋಪಿಗಳು ಅರೆಸ್ಟ್! - Mahanayaka
12:57 PM Thursday 28 - August 2025

ದತ್ತಜಯಂತಿ ವೇಳೆ ರಸ್ತೆಯಲ್ಲಿ ಮೊಳೆ ಹಾಕಿದ ಆರೋಪಿಗಳು ಅರೆಸ್ಟ್!

chikkamagaluru
16/12/2022


Provided by

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ದುಷ್ಕರ್ಮಿಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಹಮದ್ ಶಹಬಾಸ್, ವಾಹೀದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದು, ಇವರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳಾಗಿದ್ದಾರೆ.  ಡಿಸೆಂಬರ್ 6–7–8 ರಂದು  ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ದತ್ತಜಯಂತಿಯ ಮೊದಲ ದಿನ ಮಹಿಳೆಯರು ಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆ ಚೆಲ್ಲಿದ್ದರು  ಎಂದು ಆರೋಪಿಸಲಾಗಿದೆ.

ಪೊಲೀಸರ ವಾಹನ  ಸೇರಿದಂತೆ ನಾಲ್ಕೈದು ವಾಹನಗಳು ಟಯರ್ ಪಂಕ್ಚರ್ ಆಗಿ ರಸ್ತೆ ಮಧ್ಯೆ ನಿಂತಿದ್ದವು. ಇದರಿಂದಾಗಿ ಮೊಳೆ ಚೆಲ್ಲಿರುವುದು ಬೆಳಕಿಗೆ ಬಂದಿತ್ತು. ಹಾರ್ಡ್‍ವೇರ್ ಶಾಪ್‍ನಲ್ಲಿ 4 ಕೆ.ಜಿ. ಮೊಳೆಗಳನ್ನು  ಕಿಡಿಗೇಡಿಗಳು ಖರೀದಿಸಿದ್ದರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ  ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿರುವ ಗ್ರಾಮಾಂತರ ಪೊಲೀಸರು, ತಲೆಮರೆಸಿಕೊಂಡಿರೋ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ರಚನೆ  ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ